ಶಿಗ್ಗಾವ್

ಶ್ರೀರಾಮನ ಭಾವಚಿತ್ರ ಪೂಜೆ

ಶ್ರೀರಾಮನ ಭಾವಚಿತ್ರ ಪೂಜೆ

ಶಿಗ್ಗಾವಿ 23: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಶಿಗ್ಗಾವಿ ಪಟ್ಟಣದ ಜಯನಗರದಲ್ಲಿ ಶ್ರೀರಾಮನ ಭಾವಚಿತ್ರ ಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನ ಓಣಿಯ ಮಹಿಳೆಯರು ಹಾಗೂ ಸಾರ್ವಜನಿಕರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. 

ಜಯನಗರ ಓಣಿಯಲ್ಲಿ ಮಹಿಳೆಯರು ದೀಪೋತ್ಸವ ಕಾರ್ಯಕ್ರಮದಲ್ಲಿ ಒಂದೇ ಬಣ್ಣದ ಸೀರೆಯನ್ನುಟ್ಟು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು, ಜೊತೆಗೆ ಶ್ರೀರಾಮ ಜಯಘೋಷದೊಂದಿಗೆ ಹತ್ತಿರದ ಗಣೇಶ ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರು ಗಣೇಶನಿಗೆ ಹಾಗೂ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ದೀಪಾರತಿ ಬೆಳಗಿದರು, ನಂತರ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತ್ತು, ಕಾರ್ಯಕ್ರಮದಲ್ಲಿ ಎಸ್‌.ಎಸ್‌.ಎಲ್‌.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ತಾಲೂಕಿಗೆ ಕೀರ್ತಿ ತಂದ ಜಯನಗರದ ನಿವಾಸಿ ಚೈತ್ರಾ ಹಾದಿಮನಿ ವಿದ್ಯಾರ್ಥಿನಿಯನ್ನ ಜಯನಗರದ ಮುಖಂಡರು ಸನ್ಮಾನಿಸಿ ಗೌರವಿಸಿದರು, ಈ ಸಂದರ್ಭದಲ್ಲಿ  ಮುಖಂಡರು, ಮಹಿಳೆಯರು ಹಾಗೂ ಯುವಕರು ಇದ್ದರು. 


ಸುದ್ದಿ ಓದಿ