ಭಗವಾನ ಮಹಾವೀರರ ಅಹಿಂಸಾ ಸಂದೇಶ ಇಂದಿನ ಅಗತ್ಯತೆ: ಜೊಲಾಪೂರಿ
ಲೋಕದರ್ಶನ ವರದಿ
ಯರಗಟ್ಟಿ 04: ಭಗವಾನ ಮಹಾವೀರರು ಇಡೀ ವಿಶ್ವಕ್ಕೆ ಮತ್ತು ಮಾನವ ಕುಲಕ್ಕೆ ಅಂಹಿಸೆ ಮತ್ತು ಶಾಂತಿ ಸಂದೇಶ ನೀಡಿದ್ದು, ಅವರ ಸಂದೇಶಗಳು ಎಲ್ಲ ಸಮಾಜಕ್ಕೆ ಇಂದಿಗೂ ಅನ್ವಯವಾಗುತ್ತವೆ ಎಂದು ಸಮಾಜದ ಮುಖಂಡ ರವೀಂದ್ರ ಜೊಲಾಪೂರಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮ ಪಂಚಾಯತ ಕಾಯರ್ಾಲಯದಲ್ಲಿ ಮಂಗಳವಾರ ಮಹಾವೀರ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಹಿಂಸೆ ತತ್ವಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು. ಇಂದು ವಿಶ್ವಕ್ಕೆ ಶಾಂತಿಯ ಅವಶ್ಯಕತೆವಿದೆ. ಭಗವಾನ ಮಹಾವೀರರು ಬದುಕಿ ಮತ್ತು ಬದಕಲು ಬಿಡಿ ಎಂದು ನೀಡಿದ ಸಂದೇಶ ಇಂದಿನ ಅಗತ್ಯತೆಯಾಗಿದೆ ಎಂದು ಹೇಳಿದರು.
ಗುಮಾಸ್ತ ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ಮಹೇಶ ಇಟ್ನಾಳ, ಮಹಾಂತೇಶ ಸಾಲಿ, ಗೋಪಾಲ ವನ್ನೂರ, ಗುರು ಹುಗಾರ, ವಿಠ್ಠಲ ಉಪ್ಪಾರ, ಕಲ್ಲೋಳೆಪ್ಪ ಉಪ್ಪಾರ, ಅನುರಾಧಾ ಸಾಲಿ, ಲಕ್ಷ್ಮೀ ಮಾದರ ಹಾಗೂ ಸಿಬ್ಬಂದಿ ಇದ್ದರು