ಶಿಗ್ಗಾವ್

ಪ್ರಯಾಣಿಕರಿಲ್ಲದೆ ಭಣಗುಡುತ್ತಿರುವ ಶಿಗ್ಗಾವಿ ಬಸ್ ನಿಲ್ದಾಣ

ಪ್ರಯಾಣಿಕರಿಲ್ಲದೆ ಭಣಗುಡುತ್ತಿರುವ ಶಿಗ್ಗಾವಿ ಬಸ್ ನಿಲ್ದಾಣ
ಪ್ರಯಾಣಿಕರು ಇಲ್ಲದೆ ಬಿಕೋ ಎನ್ನುತ್ತಿರುವ ಶಿಗ್ಗಾವಿ ಬಸ್ ನಿಲ್ದಾಣ.

ಶಿಗ್ಗಾವಿ 29: ಜನತಾಕರ್ಫ್ಯೂ (ಲಾಕ್‌ಡೌನ್) ಹಿನ್ನಲೆಯಲ್ಲಿ ಶಿಗ್ಗಾವಿ,ಬಂಕಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಜನ ಸಂಚಾರ ಸಂಪೂರ್ಣ ಸ್ತಬ್ದಗೊಂಡು ರಸ್ತೆಗಳು ಬಿಕೋ ಎನ್ನುವಂತಾಗಿದೆ. ಬೆಳಿಗ್ಗೆ 10 ಗಂಟೆ ಬಳಕ ವ್ಯಾಪಾರ ವಹಿವಾಟು ನಿಶಬ್ದವಾಗಿದೆ. 

ಬುಧವಾರ ಸಂತೆ ದಿನವಾದ ಶಿಗ್ಗಾವಿಯಲ್ಲಿ ಸಂತೆ ಹಚ್ಚಿದ್ದ ಜನರನ್ನು ಚದುರಿಸಲು ಪೊಲೀಸ್‌ರು ಲಘು ಲಾಠಿ ಪ್ರಹಾರ ನಡೆಸಿದರು. ಅನಾವಶ್ಯಕ ಓಡಾಡುತ್ತಿದ್ದ ಜನರನ್ನು ತಡೆಯವಲ್ಲಿ ಪೊಲೀಸ್‌ರು, ಹರ ಸಹಾಸ ಪಡುತ್ತಿದ್ದದೃಶ್ಯ ಸಾಮಾನ್ಯವಾಗಿತ್ತು. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ಮಾತ್ರ ತೆರೆದುಕೊಂಡಿದ್ದವು. 

ಲಾಕ್‌ಡೌನ್‌ಅರಿವು ಇಲ್ಲದ ರೈತರು, ಎಂದಿನಂತೆ ಅವಶ್ಯಕ ಸಾಮಾಗ್ರಿಗಳ ಖರೀಧಿಗೆ ಶಿಗ್ಗಾವಿ, ಬಂಕಾಪುರ ಪಟ್ಟಣಗಳಿಗೆ ದೌಡಾಯಿಸಿದ್ದಾದರೂ ಅಂಗಡಿಗಳು ಬಾಗಿಲು ಮುಚ್ಚಿಕೊಂಡಿದ್ದರಿಂದ ಬಂದದಾರಿಗೆ ಸುಂಕವಿಲ್ಲ ಎಂಬಂತೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಓಷಧಿ ಅಂಗಡಿಗಳ ಮುಂದೆ ಜನರ ದಂಡು ಎದ್ದುಕಾಣುತಿತ್ತು. 

ಇತ್ತ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅತಿಥಿ ಆಧಾರದಿಂದ ಸ್ವಾಗತಿಸುವ ಡಾ.ಹನುಮಂತಪ್ಪ ಪಿ.ಎಚ್‌., ನೇತೃತ್ವದಲ್ಲಿ ವೈದ್ಯ, ಸಿಬ್ಬಂದಿಗಳು, ಅವರಲ್ಲಿರುವ ರೋಗ ಲಕ್ಷಣ ಸೂಕ್ಷ್ಮವಾಗಿ ಗಮನಿಸಿ ಅಗತ್ಯ ಚಿಕಿತ್ಸೆ ಪಡೆಯಲು ಸರದಿಯಲ್ಲಿ ನಿಲ್ಲುವ ರೋಗಿಗಳಿಗೆ ಶ್ಯಾಮಿಯಾನ್ ಹಾಕಿ ಗಮನ ಸೆಳೆದಿದ್ದಾರೆ. 

ಒಟ್ಟಾರೆ, ಜನತಾಕರ್ಫ್ಯೂ (ಲಾಕ್‌ಡೌನ್) ಕೆಲವರಿಗೆ ನೆಮ್ಮದಿ ನೀಡಿದ್ದಾದರೆ ಇನ್ನು ಕೆಲವರಿಗೆ ಬೇಸರ ತರಿಸಿದೆ. ವ್ಯಾಪಾರಿಗಳಲ್ಲಿ ಅಕ್ರೋಶ ಮೂಡಿಸಿದ್ದು ವಿಶೇಷ ಏಕೆಂದರೆ ಚಿನ್ನಬೆಳ್ಳಿ, ಸ್ಟೇಶನರಿ, ಬಟ್ಟೆ ಅಂಗಡಿ, ಕ್ಷೌರದ ಅಂಗಡಿ, ಟೇಲರಿಂಗ್ ಇತ್ಯಾದಿ ವ್ಯಾಪಾರಸ್ಥರಿಗೇಕೆ ಪರವಾನಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೋರೋನಾ ಸೋಂಕು ಹರಡುವ ಪೂರ್ವದಲ್ಲಿ ವಾರಕ್ಕೊಮ್ಮೆ ಸಂತೆ ಅದೇ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮತ್ತು ಅನೇಕರು ಮರಣ ಹೊಂದುತ್ತಿದ್ದ ಸಮಯದಲ್ಲಿ ಪ್ರತಿ ದಿನ ಬೆಳಿಗ್ಗೆ ದಿನಾಲು 6 ಗಂಟೆಯಿಂದ 10 ಗಂಟೆಯವರೆಗೆ ಸಂತೆ ಇದು ಯಾವ ಕಾನೂನು ? ಯಾರು ಸಹಿತ ಮಾಸ್ಕ ಧರೀಸದೇ, ಸಾಮಾಜಿಕ ಅಂತರ ಕಾಪಾಡದೇ ಹಾಗೇ ಲೀಲಾಜಾಲವಾಗಿ ಸಾರ್ವಜನಿಕರು ಅಡ್ಡಾಡುತ್ತಾರೆ. 

ಡಾ. ಬಿ.ಹೆಚ್‌.ವೀರಣ್ಣಾ

ಖ್ಯಾತ ವೈದ್ಯರು ಶಿಗ್ಗಾವಿ. 

ಸುದ್ದಿ ಓದಿ