ರಾಣೆಬೆನ್ನೂರ

ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ.95ರಷ್ಟು

ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ.95ರಷ್ಟು

ಲೋಕದರ್ಶನ ವರದಿ 

ರಾಣೇಬೆನ್ನೂರು 21:  ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಣೇಬೆನ್ನೂರು 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದು, 38 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಶಾಲೆಯ ಫಲಿತಾಂಶವು ಪ್ರತಿಶತ ಶೇ.95 ಆಗಿದೆ. ಇದರಲ್ಲಿ 09 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 26 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ, 03 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.  

 ಜ್ಯೋತಿ. ಗೋಡಿಹಾಳ ಶೇ.96.96 ಪ್ರಥಮ, ರೇಣುಕಾ. ಬಗಾಡೆ ಶೇ. 94.50 ದ್ವಿತೀಯ, ಮೇಘಾ. ಬಾರಕೇರ ಶೇ. 92.90 ರಷ್ಟು ತೃತೀಯ ಸ್ಥಾನ ಪಡೆದಿದ್ದಾರೆ. 

ಶಾಲೆಗೆ ಉತ್ತಮ ಪಲಿತಾಂಶವನ್ನು ತಂದುಕೊಟ್ಟಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಖಜಾಂಚಿಗಳು ಹಾಗೂ ಎಲ್ಲ ನಿರ್ದೇಶಕರುಗಳು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಅಬಿನಂದನೆಯನ್ನು ಸಲ್ಲಿಸಿರುತ್ತಾರೆ. 


ಸುದ್ದಿ ಓದಿ