ಕಾರವಾರ

ಜೀವ ಉಳಿಸುವ ಡಾಕ್ಟರ್‌ಗಳನ್ನು ಗೌರವದಿಂದ ಕಾಣಬೇಕು

ಜೀವ ಉಳಿಸುವ ಡಾಕ್ಟರ್‌ಗಳನ್ನು ಗೌರವದಿಂದ ಕಾಣಬೇಕು

ಬನವಾಸಿ 01: ವೈದ್ಯೋ ನಾರಾಯಣ ಹರಿಃ ಎನ್ನುವ ಮಾತಿದೆ. ವೈದ್ಯರಿಲ್ಲದ ಜಗತ್ತನ್ನು ಊಹಿಸಲೂ ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಜೀವ ಉಳಿಸಿ ಆಪತ್ಬಂದವನಂತೆ ಕಾಪಾಡುವ ವೈದ್ಯರನ್ನು ಗೌರವದಿಂದ ಕಾಣಬೇಕು ಎಂದು ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಹೇಳಿದರು.  

ಅವರು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ ರಾಷ್ಟ್ರೀಯ ವೈದ್ಯ ದಿನಾಚರಣೆಯ ಅಂಗವಾಗಿ ಸ್ಥಳೀಯ ಗಾರ್ಡನ್ ಅಭಿವೃದ್ದಿ ಸಂಸ್ಥೆ ಹಾಗು ಜಿ.ಎಸ್‌.ಪಿಳ್ಳೆ್ಘೈ ಗ್ರೂಪ್ಸ್‌ ವತಿಯಿಂದ ವೈದ್ಯಾಧಿಕಾರಿಗಳನ್ನು  ಸನ್ಮಾನಿಸಿ ಮಾತನಾಡುತ್ತ, ಸಮಾಜಕ್ಕೆ ವೈದ್ಯರ ಪಾತ್ರ, ಕೆಲಸದ ಜವಾಬ್ದಾರಿ ಹಾಗೂ ಪ್ರಮುಖ್ಯತೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಅಗತ್ಯವಿದೆ. ಈ ಉದ್ದೇಶದಿಂದಲೇ ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ವೈದ್ಯರು ರೋಗಿಯ ರೋಗವನ್ನು ಗುಣಪಡಿಸುವುದು ಮಾತ್ರವಲ್ಲದೇ ಸಮಾಜದ ಆರೋಗ್ಯವನ್ನು ಕಾಪಾಡುತ್ತಾರೆ. ಕರೋನಾ ಸೋಂಕಿನ ವಿರುದ್ಧ ಹಗಲಿರುಳು ಸಾವಿರಾರು ವೈದ್ಯರು ತಮ್ಮ ಜೀವದ ಹಂಗುತೊರೆದು ರಜೆ ಇಲ್ಲದೆ ಕರೋನಾ ಪಿಡುಗಿನ ವಿರುದ್ಧ ಹೊರಡುತ್ತಿರುವುದನ್ನು ಕಂಡಾಗ ವೈದ್ಯರ ಪಾತ್ರದ ಮಹತ್ವ ತಿಳಿಯುತ್ತದೆ ಎಂದರು.  

ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಶ್ರೀ ಹೆಗಡೆ ಹಾಗೂ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವೇಂದ್ರ ನಾಯ್ಕ್‌ ಅವರನ್ನು ಸಂಸ್ಥೆಯ ವತಿಯಿಂದ ಗಿಡ ಹಾಗೂ ಅಭಿನಂದನಾ ಪತ್ರ ನೀಡಿ ಸತ್ಕರಿಸಲಾಯಿತು.  

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಜಯಶ್ರೀ ಹೆಗಡೆ, ರಾಘವೇಂದ್ರ ನಾಯ್ಕ್‌, ಬಸವರಾಜ, ಅಬ್ದುಲ್ ಗಫಾರ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು. 


ಸುದ್ದಿ ಓದಿ