ಗುರುವಿನ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ
ಲೋಕದರ್ಶನ ವರದಿ
ಯರಗಟ್ಟಿ 24: ಪ್ರತಿಯೊಬ್ಬ ಶಿಕ್ಷಕನು ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಧಾರೆಯರೆಯಬೇಕು. ನಮ್ಮಲ್ಲಿರುವ ಜ್ಞಾನವನ್ನು ಹಾಗೆ ನಮ್ಮಲ್ಲಿಯೇ ಇಟ್ಟುಕೊಂಡು ಹಾಗೆಯೇ ಹೋಗಬಾರದು. ಇದರಿಂದ ನಾವು ಮಕ್ಕಳಿಗೆ ಹೇಳುವದರಿಂದ ನಮಗೂ ಹೊಸ ಹೊಸ ಜ್ಞಾನ ಬರುತ್ತದೆ ಎಂದು ಶಾಲೆಯಿಂದ ನಿವೃತ್ತಗೊಂಡ ಹಿರಿಯ ಶಿಕ್ಷಕಿ ಎಮ್ ಎಸ್ ರಾಹುತನವರ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಅವರು ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನಿವೃತ್ತಿಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ಎದುರು ವಾದಿಸದೆ ವಿದ್ಯಾಭ್ಯಾಸ ಮಾಡಬೇಕು. ನನಗೆ ನೀಡಿದ ಸಹಯ ಸಹಕಾರ ಎಲ್ಲ ಶಿಕ್ಷಕರಿಗೆ ನೀಡಬೇಕು ಎಂದರು.
ಮುಖ್ಯೋಪಾಧ್ಯಾಯರು ಎಮ್ ಬಿ ಕಡಕೋಳ, ಸರ್ಕಾರ ನ್ವಕರರ ಸಂಘದ ನಿರ್ದೇಶಕರು ಸಂಗಮೇಶ ಖನ್ನಿನಾಯ್ಕರ, ಸೈದುಸಾಬ ಸನದಿ, ಬಾಳಪ್ಪ ಬಾಗೇವಾಡಿ, ಸಿದ್ದಪ್ಪ ಮುಕ್ಕನವರ, ನಿಂಗಪ್ಪ ನಡುವಿನ, ಪ್ರಕಾಶ ಹುಂಡೇಕಾರ, ಮುಗಟಸಾಬ ಮುಗಟಖಾನ, ದಸ್ತಗಿರಸಾಬ ಕೋಟೂರ, ಅಶೋಕ ಮಾಳಕ್ಕನವರ, ಶ್ರೀಧರ ಉದಗಟ್ಟಿ, ನಕುಲ ಮಾಳೈನವರ, ರಾಮಚಂದ್ರ ಬಡಿಗೇರ, ಮಹಾವೀರ ಹುಕ್ಕೇರಿ, ಸಹ ಶಿಕ್ಷಕರು, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು