ಯರಗಟ್ಟಿ

ಮಾನವ ಕುಲಕ್ಕೆ ಕೊಡುಗೆ ನೀಡದಿದ್ದರೆ ಬದುಕಿದ್ದು ವ್ಯರ್ಥ: ಮಠದ

ಮಾನವ ಕುಲಕ್ಕೆ ಕೊಡುಗೆ ನೀಡದಿದ್ದರೆ ಬದುಕಿದ್ದು ವ್ಯರ್ಥ: ಮಠದ

ಯರಗಟ್ಟಿ 01: ಭೂಮಂಡಲಕ್ಕೆ ಬರುವಾಗ ಕೇವಲ ಉಸಿರು ಇರುತ್ತದೆ. ಭೂಮಿ ಬಿಟ್ಟು ಹೋಗುವಾಗ ಉಸಿರು ಇರುವುದಿಲ್ಲ. ಅದರ ಮಧ್ಯೆ ಈ ಮಾನವ ಕುಲಕ್ಕೆ ನೀನು ಕೊಡುಗೆ ನೀಡಿದ್ದರೆ ಮಾತ್ರ ನಿನ್ನ ಹೆಸರಿರುತ್ತದೆ ಇಲ್ಲದಿದ್ದರೆ ಬದುಕಿದ್ದು ವ್ಯರ್ಥ ಎಂದು ಯರಗಟ್ಟಿ ತಹಶೀಲ್ದಾರ ಎಂ. ಎನ್‌. ಮಠದ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ವ್ಯಸನ ಮುಕ್ತ ದಿನಾಚರಣೆ ಹಾಗೂ ಇಳಕಲ್ ವಿಜಯಮಹಾಂತೇಶ್ವರ ಸಂಸ್ಥಾನದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ನಿಮಿತ್ಯ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಪ. ಪಂ. ಮುಖ್ಯಾಧಿಕಾರಿ ಡಿ ಎನ್ ತಹಶೀಲ್ದಾರ ಮಾತನಾಡಿ ಇಂದಿನ ಆಧುನಿಕ ವ್ಯಾಪಾರೀಕರಣವು ಸಂಪೂರ್ಣ ಯುವಕರ ಮೇಲೆ ನಿಂತಿದೆ. ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ. ಮಾದಕ ವಸ್ತುಗಳ ಮೇಲೆ ಹಾನಿಕಾರಕ ಎಂಬ ಮಾಹಿತಿ ಇದ್ದರು ಸಹಿತ ಅದರಿಂದ ಯುವಜನತೆ ದೂರವಾಗದಿರುವುದು ವಿಷಾದನೀಯ ಸಂಗತಿ. ಇದರಿಂದ ದೇಶದಲ್ಲಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ತಿಳಿಸಿದ ಅವರು ಸ್ವಚ್ಛಂದ ಸಮಾಜ ನಿರ್ಮಾಣಕ್ಕೆ ಯುವಕರು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.ಪಶು ವೈದ್ಯಾಧಿಕಾರಿ ಡಾ ಎಮ್‌. ವಿ ಪಾಟೀಲ, ಉಪತಹಸೀಲ್ದಾರ ಸಂತೋಷ ಜಾಧವ, ಶಿರಸ್ದಾರ ಎಸ್‌. ಬಿ. ಕುಲಕರ್ಣಿ, ಪ. ಪಂ. ಕಿರಿಯ ಆರೋಗ್ಯ ನೀರೀಕ್ಷಕ ಪ್ರಕಾಶಗೌಡ ಪಾಟೀಲ, ಪ. ಪಂ. ಲೆಕ್ಕ ಸಹಾಯಕ ಆನಂದ ಬೆಳವಿ, ಗ್ರಾಮ ಆಡಳಿತಾಧಿಕಾರಿ ಎಲ್‌. ಬಿ. ದಳವಾಯಿ, ಪ. ಪಂ. ಸಿಬ್ಬಂದಿಯಾದ ಕೆ. ಎಸ್‌. ಬಾಕಳೆ, ಅಡಿವೆಪ್ಪ ಇಟಗೌಡ್ರ, ಮಲಿಕ ಸಿಕ್ಕಲಗಿ ಸೇರಿದಂತೆ ತಹಶೀಲ್ದಾರ ಕಚೇರಿ ಸಿಬ್ಬಂದಿ ವರ್ಗದವರು ಇದ್ದರು. 


ಸುದ್ದಿ ಓದಿ