ಸದ್ಗುಣ ಸಚ್ಚಾರಿತ್ರ್ಯದಿಂದ ಜೀವನ ಉಜ್ವಲ : ಶ್ರೀ ರಂಭಾಪುರಿ ಜಗದ್ಗುರುಗಳು
ಬ್ಯಾಡಿಗಿ-ನವಂಬರ್ 18:ಬಹು ಜನ್ಮಗಳ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ಸಂಸ್ಕಾರ ಸಂಸ್ಕೃತಿಯಿಂದ ಜೀವನ ಉನ್ನತಿಯಾಗಲು ಸಾಧ್ಯ. ಸದ್ಗುಣ ಸಚ್ಚಾರಿತ್ರ್ಯದಿಂದ ಜೀವನ ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾತರ್ೀಕ ದೀಪೋತ್ಸವ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಯಾರೂ ಕೊಡಲಾರದೇ ಇರುವ ಅಮೂಲ್ಯ ಸಂಪನ್ಮೂಲಗಳನ್ನು ಭಗವಂತ ನಮ್ಮೆಲ್ಲರಿಗೆ ಕರುಣಿಸಿದ್ದಾನೆ. ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಧರ್ಮವಾಗಬೇಕು. ಧ್ಯಾನ ಜ್ಞಾನ ಮತ್ತು ಆಚರಣೆ ಮೂಲಕ ಭಗವಂತನ ಕಾರುಣ್ಯಕ್ಕೆ ಒಳಗಾಗಬೇಕು. ದೇವಾನು ದೇವತೆಗಳು ಶಿವನನ್ನು ಪೂಜಿಸಿ ಆರಾಧಿಸಿ ಇಷ್ಟಾರ್ಥ ಫಲಗಳನ್ನು ಪಡೆದಿದ್ದಾರೆ. ವೀರಶೈವ ಧರ್ಮದಲ್ಲಿ ಇಷ್ಟಲಿಂಗ ಪೂಜೆಯ ಮೂಲಕ ಜೀವನ್ಮುಕ್ತಿ ಸಾಧಿಸಬಹುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಭೌತಿಕ ಸಂಪತ್ತು ಶಾಶ್ವತವಲ್ಲ. ಜೀವನವೂ ಶಾಶ್ವತವಲ್ಲ. ಆದರೆ ಸತ್ಯ ಧರ್ಮ ಒಂದೇ ಸ್ಥಿರ. ಜೀವನದಲ್ಲಿ ಧರ್ಮದ ಮೌಲ್ಯಗಳನ್ನು ಪರಿಪಾಲಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಬ್ಯಾಡಿಗಿ ಶಿರಡಿ ಸಾಯಿಬಾಬಾ ಪ್ರತಿಷ್ಠಾನದ ಕಾರ್ಯದಶರ್ಿ ಮಂಜುನಾಥ ಶಾಸ್ತ್ರಿಗಳು ಭಕ್ತರೆಲ್ಲರ ಸಹಕಾರ ಸೇವಾ ಮನೋಭಾವನೆಯಿಂದ ಅಭಿವೃದ್ಧಿ ಪಡಿಸಿ ಭಕ್ತ ಸಂಕುಲಕ್ಕೆ ಆದರ್ಶ ಪಥ ತೋರಿದ್ದಾರೆ. ದೀಪ ಜ್ಞಾನದ ಸಂಕೇತ. ಅರಿವು ಆದರ್ಶಗಳಿಂದ ಜೀವನ ಉಜ್ವಲಗೊಳ್ಳಲೆಂದು ಶುಭ ಹಾರೈಸಿದರು.
ಬಂಕಾಪುರ ರೇವಣಸಿದ್ಧೇಶ್ವರ ಶ್ರೀಗಳು, ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶ್ರೀಗಳು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಬ್ಯಾಡಿಗಿ ವಿರಕ್ತಮಠದ ಮಲ್ಲಿಕಾಜರ್ುನ ಶ್ರೀಗಳು ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು. ಪೂಜಾ ಸಂದರ್ಭದಲ್ಲಿ ಗುಡ್ಡದಮಲ್ಲಾಪುರದ ಮೂಕಪ್ಪ ಉಭಯ ಶ್ರೀಗಳು ಉಪಸ್ಥಿತರಿದ್ದ ಸನ್ನಿವೇಶ ಅಪೂರ್ವವಾಗಿತ್ತು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಸಮಾರಂಭವನ್ನು ಉದ್ಘಾಟಿಸಿದರು. ಪುರಸಭಾ ಅಧ್ಯಕ್ಷಿಣಿ ಫಕ್ಕೀರಮ್ಮ ಚಲವಾದಿ, ಪುರಸಭಾ ಮಾಜಿ ಅಧ್ಯಕ್ಷ ಮುರಿಗೆಪ್ಪ ಎಚ್. ಶೆಟ್ಟರ್ ಉಪಸ್ಥಿತರಿದ್ದರು.
ರಾಜಕೀಯ ಧುರೀಣ ಎಸ್.ಆರ್.ಪಾಟೀಲ, ರವೀಂದ್ರ ದಂಪತಿಗಳು, ಎಂ.ಬಿ.ಹಿರೇಮಠ, ರುದ್ರಯ್ಯ ಬೂದಿಹಾಳಮಠ ಇನ್ನೂ ಮೊದಲಾದ ಗಣ್ಯರು ಉಪಸ್ಥಿತರಿದ್ದು ಗೌರವ ಗುರುರಕ್ಷೆ ಪಡೆದರು. ಮಂಜಯ್ಯ ಶಾಸ್ತ್ರಿಗಳು ಶ್ರೀ ರಂಭಾಪುರಿ ಜಗದ್ಗುರುಗಳ ಮಹಾಪೂಜೆಯಲ್ಲಿ ಪಾದಪೂಜಾ ನೆರವೇರಿಸಿದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಹಸ್ರಾರು ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಧನ್ಯರಾದರು.