ತಾಳಿಕೋಟಿ

ಧರ್ಮದ ಹೆಸರಲ್ಲಿ ದ್ವೇಷ ಬೇಡ ಸಹೋದರತೆಯಿಂದ ಬಾಳೋಣ: ನಡಹಳ್ಳಿ

ಧರ್ಮದ ಹೆಸರಲ್ಲಿ ದ್ವೇಷ ಬೇಡ ಸಹೋದರತೆಯಿಂದ ಬಾಳೋಣ: ನಡಹಳ್ಳಿ


ತಾಳಿಕೋಟೆ12: ಧರ್ಮದ ಹೆಸರಿನಲ್ಲಿ ದ್ವೇಷವನ್ನು ಬಳಸದೆ ಹಿಂದು ಮುಸ್ಲಿಂರು ಪರಸ್ಪರ ಸಹೋದರರಂತೆ ಬಾಳಬೇಕು. ಹಿಂದೂ ಮುಸ್ಲಿಂ ಎಂಬ ಬೇಧಭಾವ ಮಾಡಿಲ್ಲ, ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ನನಗೆ ಸಮಾನರು ಎಂದು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ, ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು. 

ಪಟ್ಟಣದ ಜಾನಕಿ ಹಳ್ಳದಿಂದ ಮೈಲೇಶ್ವರ ಹಳ್ಳದವರೆಗೆ ರಾಜ್ಯ ಹೆದ್ದಾರಿಯಲ್ಲಿ 1 ಕೋಟಿ ವೆಚ್ಚದಲ್ಲಿ ರಸ್ತೆ ವಿಭಜಕ ಮಧ್ಯ ಅಲಂಕಾರಿಕ ಬೀದಿ ದೀಪಗಳ ಉದ್ಘಾಟನೆ ಹಾಗೂ ರಾಜವಾಡೆಯಲ್ಲಿ 57 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. 

ಇತ್ತಿಜಿಗೆ ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ಸಣ್ಣ ಪುಟ್ಟ ಘಟನೆಗಳಿಗೆ ಹೆಚ್ಚು ಮಹತ್ವ ನೀಡಬಾರದು. ಪ್ರಧಾನಿ ನರೇಂದ್ರ ಮೋದಿಯವರಾಗಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾಗಲಿ ಅಥವಾ ಬಿಜೆಪಿ ಪಕ್ಷವಾಗಲಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ನಾನೂ ಜಾತಿವ್ಯವಸ್ಥೆಯನ್ನು ನಂಬಿದವನಲ್ಲ. ನನ್ನ ಕ್ಷೇತ್ರದ ಎಲ್ಲ ವರ್ಗದ ಜನರ ಸೇವಕ ನಾನು. ಅವರು ನನಗೆ ಮತ ಹಾಕಲಿ ಅಥವಾ ಹಾಕದೆ ಇರಲಿ ಅವರೆಲ್ಲ ಸೇವೆ ನನ್ನ ಆಧ್ಯ ಕರ್ತವ್ಯವಾಗಿದೆ. ನಾನೆಂದಿಗೂ ನಿಮ್ಮವನಾಗಿರುವೆ ಅನ್ಯಥಾ ಭಾವಿಸುವ ಅಗತ್ಯ ಇಲ್ಲ. ಪಟ್ಟಣದ ಸರ್ವಾಂಗೀಣ ಅಬಿವೃದ್ದಿಗೆ ನಿಮ್ಮೆಲ್ಲರ ಸಲಹೆ ಸೂಚನೆ ಹಾಗೂ ಅಭಿಪ್ರಾಯ ಪಡೆದು ಕೆಲಸ ಮಾಡುತ್ತೇನೆ. ಪಟ್ಟಣದಲ್ಲಿ ಬಡವರಿಗಾಗಿ 874 ನಮ್ಮ ಮನೆ ಯೋಜನೆಯಲ್ಲಿ, 350 ಜಿ ಫ್ಲಸ್ ಮಾದರಿ ಮನೆಗಳು ಮಂಜೂರಾಗಿವೆ. ಒಂದು ಸಾವಿರ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲಾಗಿದೆ. ಪಟ್ಟಣದ ಸಮಗ್ರ ಅಬಿವೃದ್ಧಿಗಾಗಿ ರಾಜ್ಯ ಸರಕಾರ ಸಾಕಷ್ಟು ಹಣ ಮಂಜೂರಿಸಿದೆ. ಇನ್ನು 10 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಶಿಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವದು. ಇದರಿಂದ ಪಟ್ಟಣದ ಸರ್ವಾಂಗಿಣ ಅಭಿವೃದ್ಧಿಗೆ ಆಗಲಿದೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು 100 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಅನುಮೋದನೆಯಾಗಿದೆ ಎಂದರು. 

ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಉಪಾದ್ಯಕ್ಷ ಮುಸ್ತಫಾ ಚೌದ್ರಿ, ಸದಸ್ಯರಾದ ವಾಸುದೇವ ಹೆಬಸೂರ, ಯಾಸೀನ ಮಮದಾಪೂರ, ಅಕ್ಕಮಹಾದೇವಿ ಕಟ್ಟಿಮನಿ, ಜಯಸಿಂಗ ಮೂಲಿಮನಿ, ನಿರಂಜನಶಾ ಮಕಾನದಾರ, ಮಂಜೂರಿ ಬೇಪಾರಿ, ಮುದಕಣ್ಣ ಬಡಿಗೇರ, ಡಿ.ವಿ.ಪಾಟೀಲ ಅಣ್ಣಪ್ಪ ಜಗತಾಪ, ಹುಸೇನ ಜಮಾದಾರ, ಕಾಸಿನಾಥ ಕುಂಬಾರ, ನಿಂಗು ಕುಂಟೋಜಿ, ಮಹಿಬೂಬ ಲಾಹೋರಿ, ಶರಣಗೌಡ ಗೋಟಖಂಡ್ಕಿ, ರಾಘವೇಂದ್ರ ವಿಜಾಪೂರ, ಎಸ್‌.ಎಸ್‌.ಹಿರೇಮಠ, ಶಿವಶಂಕರ ಹಿರೇಮಠ, ಸನಾ ಕೆಂಬಾವಿ, ಬಿಜಾನಅಲಿ ನೀರಲಗಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ