ಬೈಲಹೊಂಗಲ

ಎಲ್ಲ ರಂಗಗಳಲ್ಲೂ ದೇಶವನ್ನು ಅಭಿವೃದ್ಧಿಗೊಳಿಸಲು ಯುವಕರು ಮುಂದಾಗಲಿ: ಡಾ.ಶಶಿಧರ ಬಗಲಿ

ಎಲ್ಲ ರಂಗಗಳಲ್ಲೂ ದೇಶವನ್ನು ಅಭಿವೃದ್ಧಿಗೊಳಿಸಲು ಯುವಕರು ಮುಂದಾಗಲಿ:  ಡಾ.ಶಶಿಧರ ಬಗಲಿ

ಲೋಕದರ್ಶನ ವರದಿ 


ಬೈಲಹೊಂಗಲ 27: ದೇಶ ಬಾಹ್ಯಾಕಾಶ, ವಿಜ್ಞಾನ, ತಂತ್ರಜ್ಞಾನ, ಕೃಷಿಯಲ್ಲಿ ಮುಂದುವರೆಯತ್ತಲಿದ್ದು, ಸುಭದ್ರ ಮತ್ತು ಸಾರ್ವಭೌಮತೆಯ ಶಾಂತಿಯುತ ರಾಷ್ಟ್ರ ಕಟ್ಟೋಣ ಯುವಕರು ಜವಾಬ್ದಾರಿ ಅರಿತು ಎಲ್ಲ ರಂಗಗಳಲ್ಲೂ ದೇಶವನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ಉಪವಿಭಾಗಾಧಿಕಾರಿ ಡಾ.ಶಶಿಧರ ಬಗಲಿ ಹೇಳಿದರು.  

    ಅವರು  ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ  ಪ್ರೌಢ ಶಾಲೆಯ ಮೈದಾನದಲ್ಲಿ  ಜರುಗಿದ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಅನ್ಯಾಯ ಸರಿಪಡಿಸಿಕೊಳ್ಳುವ ಪರಮಾಧಿಕಾರವನ್ನು ನೀಡಿದೆ. ಸಾಮಾಜಿಕ ನ್ಯಾಯ ಕಟ್ಟ ಕಡೆ ವ್ಯಕ್ತಿಗೂ ಮುಟ್ಟಬೇಕು ಎನ್ನುವ ಉದ್ದೇಶ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರದಾಗಿತ್ತು ಎಂದರು.  

    ಶಾಸಕ ಮಹಾಂತೇಶ ಕೌಜಲಗಿ, ತಹಶೀಲ್ದಾರ ಬಸವರಾಜ ನಾಗರಾಳ,  ಡಿವಾಯ್‌ಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ,ಉಪಾಧ್ಯಕ್ಷೆ ಶಶಿಕಲಾ ಹೊಸಮನಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅರ್ಜುನ ಕಲಕುಟಕರ, ವಿಶ್ವನಾಥ ಮಾತಾಡೆ, ಬುಡ್ಡೆಸಾಬ ಶಿರಸಂಗಿ, ಅಮಿರಬಿ ಬಾಗವಾನ, ಶ್ರೀದೇವಿ ದೇವಲಾಪುರ,   ತಾ.ಪಂ ಇಓ ಸುಭಾಶ ಸಂಪಗಾವಿ, ಪಶಾಲಾ, ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.  

  ತಹಶೀಲ್ದಾರ ಡಾ.ಬಸವರಾಜ ನಾಗರಾಳ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಭರಮಣ್ಣವರ ನಿರೂಪಿಸಿದರು. ಬಿಇಓ ಎ.ಎನ್‌.ಪ್ಯಾಟಿ  ವಂದಿಸಿದರು. 

ಗಮನ ಸೆಳೆದ ಪಥ ಸಂಚಲನ- ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ  ಪ್ರೌಢ ಶಾಲೆಯ ಮೈದಾನದಲ್ಲಿ  ಜರುಗಿದ ಗಣರಾಜ್ಯೋತ್ಸವ ದ್ವಜಾರೋಹಣ ಕಾರ್ಯಕ್ರಮದಲ್ಲಿ ಪಿಎಸ್‌ಐ ಪ್ರವೀಣ ಕೋಟಿ ನೇತೃತ್ವದಲ್ಲಿ  ಪೋಲಿಸದಳ, ಪಾಟೀಲ ನೇತೃತ್ವದಲ್ಲಿ ಗೃಹ ರಕ್ಷಕದಳ, ಕೆ.ಆರ್‌.ಸಿ.ಇ.ಎಸ.ಮಹಾವಿದ್ಯಾಲಯದ ಸಿನಿಯರ, ಹಾಗೂ ಜ್ಯೂನಿಯರ ಎನ್‌.ಸಿ.ಸಿ. ದಳ, ಮತಕ್ಷೇತ್ರದ ಮಾದರಿ ಶಾಲೆ ನಂ.4 ಸೇವಾದಳದ ವಿದ್ಯಾರ್ಥಿನಿಯರು  ಆಕರ್ಷಕ ಪಥ ಸಂಚಲನ ನಡೆಯಿತು. ಪತ್ರಿವರ್ಷ 20 ಕ್ಕೂ ಹೆಚ್ಚು ಶಾಲಾ ಕಾಲೇಜು ತಂಡಗಳು ಪಥಸಂಚಲನದಲ್ಲಿ ಭಾವಗಹಿಸುತ್ತಿದ್ದವು  ಕರೊನ ಹಿನ್ನೆಲೆಯಲ್ಲಿ  ಕೆಲವೇ ಶಾಲೆಗಳಿಗೆ ಪತ ಸಂಚಲನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. 

ಉಪವಿಭಾಗಾಧಿಕಾರಿ ಡಾ.ಶಶಿಧರ ಬಗಲಿ  ಗೌರವ ವಂದನೆ ಸ್ವೀಕರಿಸಿದರು. 


ಸುದ್ದಿ ಓದಿ