ಡಾ. ಅಂಬೇಡ್ಕರ ಮೂರ್ತಿ ಶಿಘ್ರದಲ್ಲಿ ಸ್ಥಾಪನೆಯಾಗಲಿ: ಅಶೋಕ ಕಾಳೆ
ಶಿಗ್ಗಾವಿ 29: ಸ್ವಾತಂತ್ರ್ಯ ಹೋರಾಟಗಾರ್ತಿ ತಾಯಿ ರಾಣಿ ಚೆನ್ನಮ್ಮನವರ ಪುತ್ತಳಿ ಸ್ಥಾಪನೆ ಸಂತೋಷದ ವಿಷಯ ಇದನ್ನು ನಾವು ಸ್ವಾಗತಿಸುತ್ತೇವೆ, ಅದೇ ರೀತಿಯಲ್ಲಿ ಡಾ ಬಿ ಆರ್ ಅಂಬೇಡ್ಕರ ಅವರ ಮೂರ್ತಿ ಶಿಘ್ರದಲ್ಲಿ ಸ್ಥಾಪನೆಯಾಗಲಿ ಎಂದು ದಲಿತ ಸೇನೆ ಮುಖಂಡ ಅಶೋಕ ಕಾಳೆ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಪತ್ರಕರ್ತರ ಕಾರ್ಯಾಲಯದಲ್ಲಿ ವಿವಿದ ಒಕ್ಕೂಟಗಳಿಂದ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಷಯದಲ್ಲಿ ಬರಿ ಆಶ್ವಾಸನೆಗಳೆ ಆಗಿವೆ ಅದನ್ನು ಬಿಟ್ಟು ಶಿಘ್ರವಾಗಿ ನಿಯೋಜಿದ ಸ್ಥಳದಲ್ಲಿ ಮೂರ್ತಿ ಸ್ಥಾಪನೆ ಆಗಲಿ ಎಂದರು.
ರೈತ ಸಂಘದ ಮುಖಂಡ ಮಂಜುನಾಥ ಕಂಕನವಾಡ ಮಾತನಾಡಿ ಕ್ಷೇತ್ರದಲ್ಲಿ ಆತ್ಮಹತ್ಯೆ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು ಶೀಲವಂತ ಸೋಮಪುರ ವಿದ್ಯಾರ್ಥಿನಿ ಕವಿತಾ ಹುಬ್ಬಳ್ಳಿ ಅವರ ನಿಗೂಢ ಸಾವು ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಭಯ ಮೂಡಿಸಿದೆ ಇದನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಕೊಲೆಗಡುಕರನ್ನು ಬಂಧಿಸಬೇಕು, ರಾಣಿ ಚೆನ್ನಮ್ಮನವರ ಪುತ್ತಳಿ ಪ್ರತಿಷ್ಠಾಪನೆ ಜೊತೆಗೆ ಆದಷ್ಟು ಬೇಗನೆ ವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಆಡಳಿತ ಹಾಗೂ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಮಾತನಾಡಿ ರಾಣಿ ಚೆನ್ನಮ್ಮನ ಮೂರ್ತಿ ಪ್ರಪ್ರತಿಷ್ಠಾಪನೆಯ ಕಾರ್ಯ ಸ್ವಾಗತಾರ್ಹ, ಕವಿತಾ ಸಾವಿನ ಬಗ್ಗೆ ತಕ್ಷಣವೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹ ಮಾಡಿದರು.
ಈ ಸಂಧರ್ಭದಲ್ಲಿ ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ರೈತ ಮುಖಂಡ ಶಂಕರಗೌಡ ಪಾಟೀಲ, ಪರಶುರಾಮ ಇಳಗೇರ, ಶೇಕಪ್ಪ ಬನ್ನಿಮಟ್ಟಿ, ಬಸವರಾಜ ಜೇಕಿನಕಟ್ಟಿ ಇದ್ದರು.