ಮಾಧ್ಯಮಗಳು ಶೋಷಿತರ ಧ್ವನಿಯಾಗಲಿ: ಶಿವಕುಮಾರ ಶ್ರೀಗಳು
ತಾಳಿಕೋಟಿ: ಪ್ರಜಾಪ್ರಭುತ್ವ ಉಳಿಸುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ, ಮಾದ್ಯಮಗಳು ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡು ಸಮಾಜದಲ್ಲಿ ಶೋಷಣೆಗೆ ಒಳಗಾದ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಕೊಡೇಕಲ್ಲ ದುರದುಂಡೇಶ್ವರ ಮಠದ ಪೀಠಾಧಿಪತಿ ಶಿವಕುಮಾರ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ರಾಣಾಪ್ರತಾಪಸಿಂಹ ವೃತ್ತದಲ್ಲಿ ಅಖಿಲ ಕರ್ನಾಟಕ ಪತ್ರಕರ್ತರ ಸಂಘ ತಾಳಿಕೋಟಿ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಇಂದು ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಸ್ಪಂಧಿಸುವ ಕಾರ್ಯ ಸರಕಾರ ಹಾಗೂ ಸಮಾಜದಿಂದಾಗಬೇಕಾಗಿದೆ. ಎಂದರು.
ಅಸ್ಕಿ ಫೌಂಡೇಶನ್ ಕೊಣ್ಣೂರದ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ ಪತ್ರಕರ್ತರ ಸೇವೆ ಅನನ್ಯವಾಗಿದೆ ಸಮಾಜವನ್ನು ತಿದ್ದುವ ಕಾರ್ಯ ಅವರಿಂದ ಮಾತ್ರ ಸಾಧ್ಯ. ಜನಪ್ರತಿನಿಧಿಗಳು ಅವರ ಸಮಸ್ಯೆಗಳನ್ನು ಪರಿಹರಿಸಲು ಇಚ್ಛಾಶಕ್ತಿ ತೊರಬೇಕು ಪತ್ರಕರ್ತರಿಗಾಗಿ ಒಂದು ಭವನವನ್ನು ನಿರ್ಮಿಸಲು ಈ ಭಾಗದ ಶಾಸಕರು ಮುಂದಾದರೆ ಅದಕ್ಕೆ ನಾನೂ ಸಹ ಕೈಜೋಡಿಸುತ್ತೇನೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ ಅವರು ಪ್ರಜಾಪ್ರಭುತ್ವ ಭದ್ರವಾಗಬೇಕಾದರೆ ನಮ್ಮ ಮಾಧ್ಯಮ ರಂಗವನ್ನು ಶಕ್ತಿಯುತಗೊಳಿಸಬೇಕು ಮಾಧ್ಯಮದವರನ್ನು ಸಮಾಜ ಗೌವಿಸುವಂಥಹ ಕಾರ್ಯ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಸ್ಲೀಂ ಧರ್ಮಗುರು ಸೈಯದ್ಶಕೀಲ ಅಹ್ಮದ್ ಖಾಜಿ ಸಾನಿಧ್ಯವಹಿಸಿದ್ದರು. ಸ್ಟಾರ್ ಸುವರ್ಣ ವಾಹಿನಿಯ ಕಾಮಿಡಿ ಕಿಲಾಡಿ ಮುನೀರ ಮುದ್ದೇಬಿಹಾಳ ಹಾಗೂ ಝೀ ಕನ್ನಡ ವಾಹಿನಿಯ ಡ್ರಾಮಾ ಕರ್ನಾಟಕ ಬಾಲ ನಟಿ ಸೃಷ್ಟಿ ದಾಸ ಆಗಮಿಸಿ ಕಾರ್ಯಕ್ರಮದಲ್ಲಿ ಹಾಸ್ಯ ನಟನೆ ಮಾಡಿ ಶೋಭೆ ಹೆಚ್ಚಿಸಿದರು. ಡಾ. ಸೋಮಶೇಖರ ಹಿರೇಮಠ ಪತ್ರಕರ್ತ ಅಬ್ದುಲ್ಗನಿ ಮಕಾನದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ, ಪರ್ತಕರ್ತರಿಗೆ ಸಮಾಜಸೇವಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಖಿಲ ಕರ್ನಾಟಕ ಪತ್ರಕರ್ತರ ಸಂಘ ತಾಳಿಕೋಟಿ ಅಧ್ಯಕ್ಷ ಅಲ್ಲಾಭಕ್ಷ ಚಳ್ಳಿಗಿಡದ, ಬಿಜೆಪಿ ಮುಖಂಡ ವಾಸುದೇವ ಹೆಬಸೂರ, ಪುರಸಭೆ ಸದಸ್ಯರಾದ ಜಯಸಿಂಗ್ ಮೂಲಿಮನಿ, ಮುದಕಪ್ಪ ಬಡಿಗೇರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಬೂಬ ಚೋರಗಸ್ತಿ, ತಾ.ಪಂ. ಇಓ. ಬಿ.ಆರ್. ಬಿರಾದಾರ. ಡಾ. ಶ್ರೀಶೈಲ ಹುಕ್ಕೇರಿ, ಕ.ರ.ವೇ. ಜಿಲ್ಲಾ ಕಾರ್ಯದರ್ಶಿ ಜೈಭೀಮ ಮುತ್ತಗಿ, ಸಂಪಾದಕ ಪುಂಡಲೀಕ ಮುರಾಳ, ಹಣಮಂತ ವಡ್ಡರ, ಮುಸ್ಲೀಂ ಬ್ಯಾಂಕ ನಿರ್ದೇಶಕರಾದ ಇಬ್ರಾಹೀಂ ಮನ್ಸೂರ, ಮಹೆಬೂಬ ಲಾಹೋರಿ, ಫಯಾಜ ಉತ್ನಾಳ, ಮಕ್ಬೂಲ್ .ಅ. ಬನ್ನೆಟ್ಟಿ, ಶಿವಶಂಕರ ಯಡಹಳ್ಳಿ, ಚಂದ್ರಸಿಂಗ ರಜಪೂತ, ಅಖಿಲ ಕರ್ನಾಟಕ ಪತ್ರಕರ್ತರ ಸಂಘದ ತಾಳಿಕೋಟಿ ಘಟಕದ ಉಪಾಧ್ಯಕ್ಷರಾದ ದೇವು ಕೂಚಬಾಳ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಹಜೇರಿ, ಕಾರ್ಯದರ್ಶಿಗಳು ಕಿಶೋರ ಕುಮಟೆ, ಅಬ್ದುಲ್ ರಹೆಮಾನ ಮೂಕೀಹಾಳ, ಲಕ್ಷ್ಮಣ ಕಲಾಲ, ನಜೀರ್ ಚೋರಗಸ್ತಿ ಸೊಮಶೇಖರ ಜಾಲಿಬೆಂಚಿ, ಸುರೇಶ ಹೊಸಮನಿ, ಪರಶುರಾಮ ವಡ್ಡರ, ನಾಗರಾಜ ಭಜಂತ್ರಿ, ಇದ್ದರು.