ತಾಳಿಕೋಟಿ

ರೈತರ ಸಂಕಷ್ಟಕ್ಕೆ ಸರ್ಕಾರವು ಸ್ಪಂದಿಸಲಿ: ರಾಜುಗೌಡ

ರೈತರ ಸಂಕಷ್ಟಕ್ಕೆ ಸರ್ಕಾರವು ಸ್ಪಂದಿಸಲಿ: ರಾಜುಗೌಡ


ತಾಳಿಕೋಟೆ 12: ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೂಡಾ ಅವರ ನೆರವಿಗೆ ಸರ್ಕಾರವು ಬರದಿರುವದು ವಿಪರ್ವ್ಯಾಸವಾಗಿದೆ. ಮಳೆಯಿಂದ ವಾಣಿಜ್ಯ ಬೆಳೆಯಾಗಿರುವ ತೊಗರಿ, ದ್ರಾಕ್ಷಿ, ದಾಳಿಂಬೆ, ಇನ್ನಿತರ ಬೆಳೆಗಳು ಹಾಳಾಗಿದ್ದು ರೈತರು ಸಾಲದ ಸುಳಿಗೆ ಸಿಲುಕುವಂತಾಗಿದ್ದು ಕೂಡಲೇ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಜಿಲ್ಲಾ ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು. 

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು ಈ ದೇಶದ ಬೆನ್ನೇಲುಬು, ರೈತರ ಪರ ಸರ್ಕಾರವೆಂದು ಮುಖ್ಯಮಂತ್ರಿಗಳು ಮತ್ತು ಸಚಿವರು ಭಾಷಣಕ್ಕೆ ಸೀಮಿತಗೊಳಿಸಿದ್ದಾರೆ. ಬೆಳೆ ಹಾನಿ ಸಮಿಕ್ಷೆ ಮಾಡಿಕೊಂಡು ಹೋಗಲಾಗಿದೆ ಆದರೆ ಪರಿಹಾರ ಮಾತ್ರ ಶೂನ್ಯವಾಗಿದೆ ಇದು ಬಿಜೆಪಿ ಸರ್ಕಾರ ರೈತರ ವಿರೋಧಿ ಸರ್ಕಾರವಾಗಿದೆ ಎಂದ ತೋರಿಸುತ್ತಿದೆ ಎಂದ ಅವರು ಈ ಸರ್ಕಾರ ಆಡಳಿತಕ್ಕೆ ಬಂದ ನಂತರ ಕೇವಲ ಘೋಷಣೆಗಳಾಗಿವೆ ಹೊರತು ಯಾವವು ಕಾರ್ಯರೂಪಕ್ಕೆ ಬಂದಿಲ್ಲಾ ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ದ್ರಾಕ್ಷೀ ಬೆಳೆಗಳು ಹಾಳಾಗಿದ್ದನ್ನು ಮನಗಂಡು 150 ಕೋಟಿ ರೂ. ಯನ್ನು ತೆಗೆದಿಟ್ಟು ಪರಿಹಾರ ನೀಡಲು ಬೆಳೆಗಳ ನಾಶ ಕುರಿತು ಸರ್ವೆಕಾರ್ಯ ನಡೆಸಿ ಸಂಪೂರ್ಣ ಸಾಲ ಮನ್ನಾ ಮಾಡಲು ಮುಂದಾಗಿದ್ದರು ಆದರೆ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕೋವಿಡ್ ನೆಪದ ಮೇಲೆ ರೈತರ ಸಾಲಮನ್ನಾಕ್ಕೆಂದು ತೆಗೆದಿಟ್ಟಿದ್ದ 150 ಕೋಟಿ ರೂ. ಹಣವನ್ನೇಲ್ಲಾ ಕೋವಿಡ್‌ಗೆ ಬಳಕೆ ಮಾಡಲಾಗಿದೆ ಹೇಳುತ್ತಾ ಸಾಗಿದ್ದಾರೆ ಆದರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತಹ ಕೆಲಸ ಮಾಡುತ್ತಿಲ್ಲಾ ವೆಂದರು. 

ರೈತರಿಗೆ ಈ ಹಿಂದೆ ನೀಡಲಾಗುತ್ತಿದ್ದ ಸಬ್ಸೀಡಿಗಳನ್ನು ಕಿತ್ತುಕೊಳ್ಳಲಾಗಿದೆ ಅಲ್ಲದೇ ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರಿಗೆ ತಟ್ಟಿದೆ ಪೇಟ್ರೋಲ್, ಡಿಸೇಲ್ ಅಲ್ಲದೇ ಅಡುಗೆ ಅನೀಲ ಬೆಲೆಯೂ ಸಹ ಗಗನಕ್ಕೇರಿದೆ ಇಂತಹ ಸಂದರ್ಬದಲ್ಲಿ ರೈತ ನಂಬಿಕೊಂಡಿದ್ದ ಬೆಳೆಗಳು ಸಹ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ ನಾನು ಕೂಡಾ ರೈತ ಕುಟುಂಭದಿಂದ ಬಂದಿದ್ದರಿಂದ ರೈತರ ಸಂಕಷ್ಟ ಅರೀತವನಾಗಿದ್ದೇನೆ ತೊಟಗಾರಿಕೆ ಬೆಳೆಗಳಿಗೆ ವಿವಿಧ ರೋಗಗಳು ಅಂಟಿಕೊಂಡು ಹಾಳಾಗಿವೆ, ತೊಗರಿ ಬೆಳೆ ಅತಿವೃಷ್ಠಿ ಮಳೆಯಿಂದ ನೇಟೆರೋಗಕ್ಕೆ ತುತ್ತಾಗಿ ಹಾಳಾಗಿ ಹೋಗಿವೆ ಆದರೆ ರಾಜ್ಯದ ಬಿಜೆಪಿ ಸರ್ಕಾರ ಕೋವಿಡ್ ನೆಪೊಡ್ಡಿ ಅಭಿವೃದ್ದಿ ಕುಂಠಿತದ ಜೊತೆಗೆ ರೈತರ ಬೆನ್ನಿಗೆ ಚೂರಿಹಾಕುವಂತಹ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. 

ಕೇಂದ್ರದ ಮೋದಿ ಸರ್ಕಾರ ರೈತ ವಿರೋಧ ಕಾಯ್ದೆಗಳನ್ನು ಜಾರಿಗೆ ತಂದಿದ್ದರ ಪರಿಣಾಮ 700 ಕ್ಕೂ ಅಧಿಕ ರೈತರು ಜೀವ ಕಳೆದುಕೊಂಡರು ಕಾಯ್ದೆ ವಾಪಸ್ಸು ಪಡೆದರೂ ಕೂಡಾ ಹೋದ ರೈತರ ಜೀವ ಮರಳಿ ಬರುವದಿಲ್ಲಾ ರೈತರ ವಿರೋಧಯಾಗಿ ನಡೆದುಕೊಂಡು ಬರುತ್ತಿರುವ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಈಗಲಾದರೂ ಕಣ್ತೇರೆದು ರೈತರ ಸಂಕಷ್ಟದ ಸಂದರ್ಬದಲ್ಲಿ ನೆರವಿಗೆ ಬರುವಂತಾಗಬೇಕು ಅಲ್ಲದೇ ರೈತರ ಸಾಲ ಮನ್ನಾ ಮಾಡಬೇಕು ಮತ್ತು ತೋಟಗಾರಿಕಾ ರೈತರ ಸಾಲದ ಬಡ್ಡಿಯಾದರೂ ಮನ್ನಾ ಮಾಡಬೇಕೆಂದು ಸರ್ವೆ ಮಾಡಿದ ಬೆಳೆಗಳಿಗೆ ಕೂಡಲೇ ಪರಿಹಾರ ನೀಡುವಂತಹ ಕಾರ್ಯವಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವದಾಗಿ ಹೇಳಿದರು. 

ಈ ಸಮಯದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಡಗಿ, ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಬಿ.ಎಸ್‌.ಇಸಾಂಪೂರ, ಕಾರ್ಯಾಧ್ಯಕ್ಷ ಮಡುಸೌಕಾರ ಬಿರಾದಾರ, ಮುತ್ತು ಧೂಳೇಕರ ಮೊದಲಾದವರು ಇದ್ದರು. 


ಸುದ್ದಿ ಓದಿ