ರಾಣೆಬೆನ್ನೂರ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಸಮಗ್ರ ಕನ್ನಡಿಗರ ಪರಿಷತ್ತಾಗಲಿ: ಡಾ. ಮಹೇಶ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಸಮಗ್ರ ಕನ್ನಡಿಗರ ಪರಿಷತ್ತಾಗಲಿ: ಡಾ. ಮಹೇಶ

ಲೋಕದರ್ಶನ ವರದಿ 

ರಾಣೇಬೆನ್ನೂರು 03: ಕನ್ನಡ ನಾಡು ನುಡಿ ಮತ್ತು ಸಂಸ್ಕ್ರತಿಯನ್ನು ನಿತ್ಯವು ವಿಜ್ರಂಭಿಸುವ ಮಹತ್ವದ ಕಾರ್ಯವು ಇಂದು ನಡೆಯಬೇಕಾಗಿದೆ.  ಕನ್ನಡ ಸಾಹಿತ್ಯ ಪರಿಷತ್ತು ಸಮಗ್ರ ಕನ್ನಡಿಗರ ಏಕೈಕ ಸ್ವಾಯತ್ಯ ಸಂಸ್ಥೆಯಾಗಿದೆ. ಅದನ್ನು ಸಮಗ್ರವಾಗಿ ಉದ್ದೇಶಿತ ಯೋಜನೆಯನ್ನು ಪರಿಪೂರ್ಣವಾಗಿ ಮತ್ತು ಪ್ರಭುದ್ದವಾಗಿ ಜಾರಿಗೆ ತರುವ ಕೆಲಸವು ಈ ಹಿಂದಿಗಿಂತಲೂ ಇಂದಿನ ಬಹು ಅಗತ್ಯವಾಗಿದೆ. ಸ್ವಾಭಿಮಾನದ ಸಂಕೇತವಾಗಿ ಬಹು ಕನ್ನಡಿಗರ ಸಾಹಿತಿಗಳ, ಕಲಾವಿದರ,  ಅಪೇಕ್ಷೆಯಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಭ್ಯರ್ಥಿ ನಾಡೂಜಾ ಡಾಽಽ ಮಹೇಶ ಜೋಶಿ ಹೇಳಿದರು. 

ಅವರು ಇತ್ತಿಚೇಗೆ ನಗರದ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದ್ದ ಮತದಾರರ ಸಮಾಲೋಚನಾ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು. ಪ್ರತಿಯೋಬ್ಬ ಕನ್ನಡಿಗರು ಸ್ವಾಯತ್ಯ ಸಂಸ್ಥೆಯ ಸದಸ್ಯರಾಗಬೇಕು, ವಿಶೇಷವಾಗಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕ್ರತಿಯ ಕುರಿತಂತೆ ಅತೀವ ಕಾಳಜಿ ಹೂಂದಿರಬೇಕು. ಇದರಿಂದ ಸಾಹಿತ್ಯ ಪರಿಷತ್ತು ಸಮಗ್ರ ಅಭಿವೃದ್ದಿಯ ಪರಿಷತ್ತಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದ ಜೋಶಿ ಅವರು ಇಗಾಗಲೇ ಕರ್ನಾಟಕದ ಎಲ್ಲ ಜಿಲ್ಲೆ, ತಾಲೂಕುಗಲ್ಲಿ ಪ್ರವಾಸ ಮಾಡಿ ಅಲ್ಲಿನ ಸ್ಥಿತಿ ಗತಿಗಳನ್ನು ಅರಿತು ಕೂಂಡಿದ್ದೇನೆ. ಸಾಹಿತ್ಯ ಪರಿಷತ್ತು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮೈಸೂರು ಕರ್ನಾಟಕ ಎನ್ನುವ ಯಾವುದೇ ತಾರತಮ್ಮೆ ಇಲ್ಲ. ಕರ್ನಾಟಕ ಒಂದೇ ಎನ್ನುವ ಮನಸ್ಸು ನಮ್ಮದಾಗಬೇಕು ಎಂದರು. 

ನವೆಂಬರ್ 21 ರಂದು ಚುನಾವಣೆ ನಡೆಯಲು ಸಿದ್ದವಾಗಿದೆ, ಅಜೀವ ಸದಸ್ಯರು ಪ್ರತೇಕ ವಿಚಾರ, ನಮ್ಮ ಭಾಗ, ನಿಮ್ಮ ಭಾಗ ಮತ್ತು ಅವರ  ಭಾಗ ಎನ್ನುವ ತಾರತಮ್ಮೆವನ್ನು ಮನಸ್ಸಿನಲ್ಲಿ ಇಟ್ಟುಕೂಳ್ಳದೆ ಪರಿಷತ್ತಿನ ಅಭಿವೃದ್ದಿಗೆ ಯಾರೂ ಕೆಲಸ ಮಾಡುವರು ಎನ್ನವುದನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಡ್ಡಾಯವಾಗಿ ಮತವನ್ನು ಚಲಾಯಿಸುವುದರ ಮೂಲಕ ಪರಿಷತ್ತಿನ ಹಿರಿಮೆ, ಗರಿಮೆ ಹೆಚ್ಚಿಸಬೇಕು. ಎಂದು ಕರೆ ನೀಡಿದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವರಗುಡ್ಡ ಗ್ರಾಮದ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರದಾನ ಅರ್ಚಕರಾದ ಶ್ರೀ ಸಂತೋಷಭಟ್ ಪೂಜಾರ ಗುರೂಜಿ ಅವರು ಮಾತನಾಡಿ ಸಮಾಜದಲ್ಲಿ ಬುದ್ದಿ ಜೀವಿಗಳು ಹೆಚ್ಚಾಗಿ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವಲ್ಲಿ ಮುಂದಾದಾಗ ಮಾತ್ರ ಪ್ರತಿಯೋಬ್ಬರು ಶಾಂತಿ, ನೆಮ್ಮದಿ ಮತ್ತು ಭಾವೈಕ್ಯತೆಯಿಂದ ಬದುಕನ್ನು ಸಾಗಿಸಲು ಸಾಧ್ಯವಾಗುವುದು. ಮಹೇಶ ಜೋಶಿ ಅವರು ಎಕೀಕರಣದ ವಿಷಯವಾಗಿ ಮತ್ತು ಇಂದಿನ ನಮ್ಮ ಕನ್ನಡಿಗರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಸಮಗ್ರವಾಗಿ ಅಧ್ಯಯನ ಮಾಡಿದ್ದಾರೆ. ಅಂತಹ ವ್ಯಕ್ತಿಯ ಆಯ್ಕೆ ಬಹು ಮುಖ್ಯವಾಗಿದೆ. ಎಂದರು.  


ವೇದಿಕೆಯಲ್ಲಿ ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ್ ಶಿರಹಟ್ಟಿ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಹೆಚ್‌.ಬಿ. ಲಿಂಗಯ್ಯ, ಮಾರುತಿ ಶಿಡ್ಲಾಪುರ, ಜಿ.ಬಿ. ಮಾಸಣಗಿ, ಪ್ರಭುಲಿಂಗಪ್ಪ ಹಲಗೇರಿ, ಪಿ.ಬಿ. ಕುಲಕರ್ಣಿ, ವಿ.ವಿ. ಹರಪನಹಳ್ಳಿ, ಸೇರಿದಂತೆ ನಗರ ಮತ್ತು ಗ್ರಾಮೀಣಪ್ರದೇಶಗಳ ನೂರಾರು ಮತದಾರ ಸದಸ್ಯರು ಪಾಲ್ಗೂಂಡಿದ್ದರು. 


ಸುದ್ದಿ ಓದಿ