ಯರಗಟ್ಟಿ

ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಲಿ: ಇಓ ಮಂಜು ಉದ್ದಾರ

ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಲಿ: ಇಓ ಮಂಜು ಉದ್ದಾರ

ಯರಗಟ್ಟಿ 29: ಇಂದಿನ ಸ್ಪರ್ಧಾತ್ಮಕ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಬೇಕು ಎಂದು ಇಓ ಮಂಜು ಉದ್ದಾರ ಕರೆ ನೀಡಿದರು. 

ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ನಂದೀಶ್ವರ ನೈಪುಣ್ಯ ಕೌಶಲ್ಯ ತರಬೇತಿ ಸಂಸ್ಥೆ ಆಯೋಜಿಸಿದ್ದ ಜೀವನ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿರುವ ವಿದ್ಯಾರ್ಥಿಗಳು ಮುಂದಿನ ಭವಿಷ್ಯದಲ್ಲಿ ಸಮರ್ಥ ಜೀವನ ರೂಪಿಸಿಕೊಳ್ಳಲು ಕೌಶಲ್ಯಜ್ಞಾನ ದಾರೀದೀಪವಾಗಲಿದೆ.ತಂತ್ರಜ್ಞಾನದ ಪ್ರಭಾವದಿಂದ ಮಾನವ ಎಲ್ಲವನ್ನೂ ಪಡೆದುಕೊಳ್ಳುವ ಹಠದಲ್ಲಿ ಜೀವನದ ಮೌಲ್ಯವನ್ನು ಮರೆಯುತ್ತಿ ರುವುದು ಅತ್ಯಂತ ವಿಷಾದನೀಯ.ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ರಾಜ್ಯ ಮತ್ತು ರಾಷ್ಟ್ರೀಯ ಯುವನೀತಿ ಯಲ್ಲಿ ಜೀವನ ಕೌಶಲ್ಯಗಳನ್ನು ಅತಂತ್ಯ ಪರಿಣಾಮಕಾರಿಯಾಗಿ ಪರಿಗಣಿಸಿ, ಜಿಲ್ಲಾದ್ಯಂತ ಆಯ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರು ವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.ಮರಡಿ ಬಸವೇಶ್ವರ ವಿದ್ಯಾ ಪ್ರಸಾರ ಮಂಡಳಿ ಉಪಾಧ್ಯಕ್ಷ ಮಂಜುನಾಥ ತಡಸಲೂರ ಮಾತನಾಡಿ, ಈ ತರಬೇತಿಯಲ್ಲಿ ವಿದ್ಯಾರ್ಥಿಗಳ ಪ್ರಮುಖ ಹತ್ತು ಜೀವನ ಕೌಶಲ್ಯಗಳಾದ ಭಾವನೆಗಳ ನಿರ್ವಹಣೆ, ಸೃಜನಾತ್ಮಕ ಚಿಂತನೆ, ನಿರ್ಣಯಕೌಶಲ್ಯ, ಪರಿಣಾಮಕಾರಿ ಸಂವಹನ, ಬಿಕ್ಕಟ್ಟು ನಿರ್ವಾಹಣೆ, ನಿರ್ಣಯ ಕೌಶಲ್ಯ, ಸಂಬಂಧಗಳ ನಿರ್ವಹಣೆ, ಸ್ವಾ ಅರಿವು, ಸಹಾನು ಭೂತಿಯ ಜತೆಗೆ ಮಾದಕ ವಸ್ತುಗಳ ದುಷ್ಪರಿಣಾಮ, ಪರಿಸರ ಜಾಗೃತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ನಂದೀಶ್ವರ ನೈಪುಣ್ಯ ಕೌಶಲ್ಯ ತರಬೇತಿ ಸಂಸ್ಥೆ ಅಧ್ಯಕ್ಷ ನಂದೀಶ್ವರ ಬಿ. ಶೆಟ್ಟರ ಶಿಬಿರಕ್ಕೆ ಚಾಲನೆ ನೀಡಿದರು. ವಿಜಯ ಪಡಿ, ಎನ್‌. ಎಸ್‌. ಕಾಂಬಳೆ, ಬಿ. ಪಿ. ತುಪ್ಪದ, ಜಿ. ಬಿ. ಬೆಟಗೇರಿ, ಬಿ. ವಿ. ಕಾಡನ್ನನವರ, ವಿ. ಸಿ. ಮಡ್ಡಿ, ಡಾ. ಕುಮಾರ ದಾಸರ ಹಾಗೂ ಯರಗಟ್ಟಿ ಮತ್ತು ಮುರಗೋಡ ವಲಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು. 


ಸುದ್ದಿ ಓದಿ