ಬೈಲಹೊಂಗಲ

ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸು ಕಾಣಲಿ: ಗಣಾಚಾರಿ

ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸು ಕಾಣಲಿ: ಗಣಾಚಾರಿ

ಬೈಲಹೊಂಗಲ 22: ಮಕ್ಕಳು ವಿದ್ಯಾರ್ಥಿ ಜೀವನದಲ್ಲೇ ಶೃದ್ಧೆಯಿಂದ ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಉನ್ನತ ಶಿಕ್ಷಣದ ಕನಸು ಕಾಣಬೇಕು ಎಂದು ಕೆನರಾ ಬ್ಯಾಂಕ ಸಹಾಯಕ ವ್ಯವಸ್ಥಾಪಕ ಈರಣ್ಣ ಗಣಾಚಾರಿ ಹೇಳಿದರು. 

ಅವರು ತಾಲೂಕಿನ ದೇವಲಾಪುರ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ನಡೆದ ಕೆನರಾ ಬ್ಯಾಂಕ ಹಾಗೂ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಸೌಲಭ್ಯ ಮತ್ತು ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿ, ಉಜ್ವಲ ಭವಿಷ್ಯಕ್ಕೆ ವಿದ್ಯಾರ್ಥಿ ಜೀವನದಿಂದಲೇ ಉಳಿತಾಯ ಮಾಡಬೇಕು. ವಿದ್ಯಾಭ್ಯಾಸಕ್ಕೆ ಬೇಕಾದ ಸಾಲ-ಸೌಲಭ್ಯ ಬ್ಯಾಂಕುಗಳು ನೀಡುತ್ತವೆ ಎಂದರು. 

ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಗೀತಾ ಖಾನಪೇಠ ಮಾತನಾಡಿ, ಬ್ಯಾಂಕಿನಲ್ಲಿ ಉಳಿತಾಯ ಮಾಡುವು ಬಗೆ, ವಿದ್ಯಾರ್ಥಿಗಳು ಬ್ಯಾಂಕಿನ ಜೊತೆ ಉತ್ತಮ ವ್ಯವಹಾರ ಹೊಂದಿದರೆ ಮುಂದೆ ಆಗುವ ಉಪಯೋಗಗಳ, ರೂಪೆ ಡೆಬಿಟ ಕಾರ್ಡ, ಕ್ರೇಡಿಟ ಕಾರ್ಡ, ಬ್ಯಾಂಕ ಮಿತ್ರ ಸೇವೆ, ಎಟಿಂ ಬಳಕೆ, ಹಲವಾರು ವಿಷಯಗಳ ಕುರಿತು ಬ್ಯಾಂಕಿನ ಕುರಿತು ತಿಳುವಳಿಕೆ ನೀಡಿದರು. 

ಮುಖ್ಯೋಪಾಧ್ಯಾಯ ಎಸ್‌.ವ್ಹಿ.ಯರಡ್ಡಿ, ದೈಹಿಕ ಶಿಕ್ಷಕ ಡಿ.ಜಿ.ಜಿಡ್ಡಿಮನಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ