ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಮೂಡಿಸಿಕೊಳ್ಳಲಿ: ಭೋವಿ
ಯರಗಟ್ಟಿ 01: ವಿದ್ಯಾರ್ಥಿಗಳು ಶಿಕ್ಷಣದ ಜೊತೆ ತಮ್ಮ ಜೀವನದಲ್ಲಿ ವೈಜ್ಞಾನಿಕ, ಕ್ರೀಡೆ ಮತ್ತು ಸ್ಪರ್ಧಾತ್ಮಕ ಮನೋಭಾವ ಮೂಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಡಿ.ಡಿ.ಭೋವಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾಷ್ಟ್ರಿಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿಜ್ಞಾನ ಶಿಕ್ಷಕಿ ಅಶ್ವಿನಿ ಹಿರೇಮಠ ಮಾತನಾಡಿ, ಮಕ್ಕಳು ಪ್ರಯೋಗಗಳನ್ನು ಮಾಡುವದರ ಮೂಲಕ ಸೃಜನಶೀಲತೆ ಹಾಗೂ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕ ಸಿ.ಆರ್.ಕಮ್ಮಾರ, ಪಿ.ಎಸ್.ವಿಜಾಪೂರ, ಎಸ್.ಎಫ್.ಮುರಗನ್ನವರ, ಸಿದ್ದು ಹಂಜಿ, ಎಸ್.ಎಂ.ಮಾಳೈನವರ, ಎಮ್.ಎ.ಬಸರಿಮರದ, ಆರ್.ಎಚ್.ಅತ್ತಾರ, ಅಶ್ವಿನಿ ಮಾನೆ, ಪುಷ್ಪಾ ನಾಯ್ಕರ, ಭೀಮವ್ವ ಉಪ್ಪಾರ, ವಿಜಯಲಕ್ಷ್ಮೀ ಬಾವಿಕಟ್ಟಿ, ಇದ್ದರು.