ಶಿಗ್ಗಾವ್

ಪುನಃ ಮರು ಪರಿಶೀಲಿಸಿ ಪ್ಯಾಕೇಜ್ ಘೋಷಣೆ ಮಾಡಲಿ

ಪುನಃ ಮರು ಪರಿಶೀಲಿಸಿ ಪ್ಯಾಕೇಜ್ ಘೋಷಣೆ ಮಾಡಲಿ

ಶಿಗ್ಗಾವಿ 22: ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ ವಿಶೇಷ ಪ್ಯಾಕೇಜ್ನಲ್ಲಿ ಕೆಲವು ದುಡಿಯುವ ವರ್ಗಗಳನ್ನು ಹಾಗೂ ಕೋವಿಡ್ ಸಮಯದಲ್ಲಿ ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿರುವ ಕೆಲವು ವರ್ಗಗಳನ್ನು ಕೈ ಬಿಟ್ಟಿರುವದು ಸರಿಯಾದ ಕ್ರಮವಲ್ಲ ಅವರು ಪುನಃ ಮತ್ತೊಮ್ಮೆ ಮರು ಪರಿಶೀಲಿಸಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯ ದಲಿತ ಮುಖಂಡ ಡಿ ಎಸ್ ಮಾಳಗಿ ಅಭಿಪ್ರಾಯ ವ್ಯಕ್ತ ಪಡಿಸಿದರು.ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿಗಳು ಮಾಡಿರುವ ವಿಷೇಶ ಪ್ಯಾಕೇಜ್ನಲ್ಲಿ ಚರ್ಮ ಕುಶಲಕಮರ್ಿಗಳನ್ನು, ಕಲ್ಲು ಕ್ವಾರಿಗಳಲ್ಲಿ ದುಡಿಯುವ ಕಾಮರ್ಿಕರನ್ನು, ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅರ್ಚಕರಿಗೆ ಸೇರಿದಂತೆ ದುಡಿಯುವ ಎಲ್ಲ ರಂಗದ ಕಾಮರ್ಿಕರಿಗೆ ಹಾಗೂ ಕೋರೊನಾ ಸಮಯದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ದಿನದ 24 ಗಂಟೆ ದುಡಿಯುತ್ತಿರುವ ಆಶಾ ಕಾರ್ಯಕತರ್ೆಯರನ್ನು ಕೈ ಬಿಟ್ಟುರುವದು ಸರಿಯಾದ ಕ್ರಮವಲ್ಲ ಆದರಿಂದ ಮುಖ್ಯಮಂತ್ರಿಗಳು ಮತ್ತೊಮ್ಮೆ ಪರಿಶೀಲನೆ ಮಾಡಿ ಇವರುಗಳನ್ನು ಗಣನೆಗೆ ತೆಗೆದುಕೊಂಡು ಅವರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ವಿನಂತಿಸಿದರು.


ಸುದ್ದಿ ಓದಿ