ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆಯಲಿ: ಚಿಲಮೂರ
ಬೈಲಹೊಂಗಲ 11: ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ಕೊವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ಸರಕಾರ ಹಮ್ಮಿಕೊಂಡಿದೆ. ಕೋವಿಡ್-19 ನಿಂದ ಮಕ್ಕಳನ್ನು ರಕ್ಷಿಸಲು ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಪಾಲಕರು ಮಕ್ಕಳಿಗೆ ಪ್ರೋತ್ಸಾಹಿಸಬೇಕೆಂದು ಪ್ರಾಚಾರ್ಯ ಎನ್.ಎಸ್.ಚಿಲಮೂರ ಹೇಳಿದರು.
ಅವರು ಪಟ್ಟಣದ ಎಸ್.ಎನ್.ವ್ಹಿ.ವ್ಹಿ.ಎಸ್. ಸಂಸ್ಥೆಯ ಎಸ್.ಜಿ.ವಿ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 15 ರಿಂದ 18 ವರ್ಷದವರೆಗೆ ಮಕ್ಕಳಿಗೆ ನೀಡುವ ಲಸಿಕಾ ಮೇಳ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಲಸಿಕೆ ಹಾಕಿಸಿಕೊಂಡು ಕೋವಿಡ್ ಮುಕ್ತ ಸಮಾಜ ನಿರ್ಮಾಣ ಮಾಡೋಣ, ಎಲ್ಲ ವಿದ್ಯಾರ್ಥಿಗಳು ಕೋವಿಡ ಲಸಿಕೆ ಪಡೆಯಬೇಕೆಂದರು.
ಆರೋಗ್ಯ ಇಲಾಖೆಯ ಎಸ್.ಎಸ್.ಮುತ್ನಾಳ, ಡಾ.ದೀಪಾ ಹಿರೇಮಠ, ಡಾ.ಗುರುಪ್ರಸಾದ ಉಪಪ್ರಾಚಾರ್ಯ ವ್ಹಿ.ಎಂ. ಬಸಿನಾಯ್ಕರ, ಉಪನ್ಯಾಸಕರಾದ ಎಸ್.ಎಸ್.ಬೆಳ್ಳಿಗಟ್ಟಿ, ಎಚ್.ಎಫ.ಅಣ್ಣಿಗೇರಿ, ಎಂ.ಸಿ.ಹೇಮಗಿರಿಮಠ ಸೇರಿದಂತೆ ಕಾಲೇಜು ಉಪನ್ಯಾಸಕರು ಕಾಲೇಜು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.