ಅಥಣಿ

ಶಿರಸಂಗಿ ಲಿಂಗರಾಜರ ನಿಸ್ವಾರ್ಥ ಜೀವನ ಪ್ರೇರಣೆಯಾಗಲಿ: ಡಾ. ಅಥಣಿ

ಶಿರಸಂಗಿ ಲಿಂಗರಾಜರ ನಿಸ್ವಾರ್ಥ ಜೀವನ ಪ್ರೇರಣೆಯಾಗಲಿ: ಡಾ. ಅಥಣಿ

ಅಥಣಿ 12: ಶಿರಸಂಗಿ ಲಿಂಗರಾಜರ ಸೇವೆ, ತ್ಯಾಗ, ನಿಸ್ವಾರ್ಥ ಜೀವನವು ಇಂದಿನ ಯುಗಮಾನಕ್ಕೆ ಸ್ಪೂರ್ತಿ ಪ್ರೇರಣೆಯಾಗಬೇಕೆಂದು ಸಾಹಿತಿ ಡಾ. ಅರ್ಚನಾ ಅಥಣಿ ಅವರು ಹೇಳಿದರು.  

ಅವರು ಲಿಂಗರಾಜ ಜಯಂತಿ ಉತ್ಸವ ಸಮಿತಿ, ಅಥಣಿ ಹಾಗೂ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಅಥಣಿ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ತ್ಯಾಗವೀರ ಶಿರಸಂಗಿ ಲಿಂಗರಾಜ ಜಯಂತಿ ಸಮಾರಂಭದಲ್ಲಿ 2022ನೇ ಸಾಲಿನ ಲಿಂಗರಾಜ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. 

ಲಿಂಗರಾಜರು ಸರ್ವಧರ್ಮ ಸಮನ್ವಯಿಗಳಾಗಿದ್ದರು. ರಾಷ್ಟ್ರೀಯ ಹರಿಕಾರರು ಭಾವೈಕ್ಯತೆಯ ಯುಗಪುರುಷರು ಆದ ಅವರ ಬದುಕು ಆದರ್ಶದಿಂದ ಕೂಡಿತ್ತು. ಬಾವಿ, ಕೆರೆ, ಕಟ್ಟೆಗಳ ಮೂಲಕ ಕುಡಿಯವ ನೀರಿನ ವ್ಯವಸ್ಥೆ, ರೈತರಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ ಲಿಂಗರಾಜರು ಪ್ರಾಯೋಗಿಕ ಬದುಕಿಗೆ ಬಹಳಷ್ಟು ಬೆಲೆ ಕೊಟ್ಟಿದ್ದರು ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿದ್ದ ಲಿಂಗರಾಜರು ಅನಿಷ್ಠ ಪದ್ಧತಿಗಳನ್ನು ವಿರೋಧಿಸಿದ್ದರು. ವರದಕ್ಷಿಣೆ, ದುಂದುವೆಚ್ಚ ಮದುವೆ ಮುಂತಾದವುಗಳನ್ನೆಲ್ಲ ಅವರು ವಿರೋಧಿಸಿದರು ಎಂದರು. 

ಲಿಂಗರಾಜ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ದಾನ ನೀಡಿದ ಮಹನಿಯರನ್ನು ಸನ್ಮಾನಿಸಲಾಯಿತು. ಭಾಷಣ ಹಾಗೂ ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಢಾಲು, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವೇದಿಕೆಯ ಮೇಲೆ ನಂದಕುಮಾರ ಸಾವಡಕರ, ಪ್ರಕಾಶ ಪಾಟೀಲ, ಅಲ್ಲಪ್ಪಣ್ಣ ನಿಡೋನಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕೀರ್ತಿ ಬಿರಾದಾರ ಪ್ರಾರ್ಥಿಸಿದರು. ಪ್ರಾಚಾರ್ಯ ಪ್ರೊ. ಎಸ್‌.ಎಲ್‌. ಪಾಟೀಲ ಸ್ವಾಗತಿಸಿದರು. ಡಾ. ಸಿ.ಎಸ್‌. ಜನವಾಡೆ ಬಹುಮಾನ ವಿತರಣೆ ನಡೆಸಿಕೊಟ್ಟರು ಡಾ. ವಿಜಯ ಕಾಂಬಳೆ ನಿರೂಪಿಸಿದರು, ಡಾ. ಎಸ್‌.ವಾಯ್‌. ಹೊನ್ನುಂಗರ ವಂದಿಸಿದರು. ಕಾರ್ಯಕ್ರಮದಲ್ಲಿ ವಿಜಯಕುಮಾರ ಬುರ್ಲಿ, ಅನೀಲ ಮೆಣಸಿ, ಮಲ್ಲಿಕಾರ್ಜುನ ಸಂಕ, ಎಮ್‌.ಎನ್‌. ಚಿಂಚೊಳ್ಳಿಮಠ, ಶಿವಪುತ್ರ ಯಾದವಾಡ, ಎಲ್ಲ ಸಿಬ್ಬಂದಿ, ವಿದ್ಯಾರ್ಥಿ/ನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ