ಶಿಗ್ಗಾವ್

ವ್ಯಾಕ್ಸಿನ್ ನೀಡುವ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸೋಣ: ಡಾ. ಹನಮಂತಪ್ಪ

ವ್ಯಾಕ್ಸಿನ್ ನೀಡುವ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸೋಣ: ಡಾ. ಹನಮಂತಪ್ಪ

ಶಿಗ್ಗಾವಿ 26 : ಕೊರೊನಾ ಮೊದಲನೆಯ ಅಲೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೆವೆ ಆದರೆ ಇಂದು ಕೊರೊನಾ ವ್ಯಾಕ್ಸಿನ್ ನೀಡುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಎಲ್ಲರು ಸೇರಿ ನಿರ್ವಹಿಸಬೇಕಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಹನಮಂತಪ್ಪ ಪಿ ಎಚ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಶಿಗ್ಗಾವಿ ಮಂಡಲದ ವತಿಯಿಂದ ಹಮ್ಮಿಕೊಂಡ ಕೊರೊನಾ ಲಸಿಕೆ ಫಲಾನುಭವಿಗಳ ನೊಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾದ ಮೊದಲ ಹಂತವನ್ನು ನಿಭಾಯಿಸುವದರಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿತ್ತು, ಆದರೆ ಇಂದು ಕೊರೊನಾ ವ್ಯಕ್ಸಿನೆಷನ್ ಪಡೆಯುವಲ್ಲಿ ಹಿಂದೆ ಇದ್ದು ಸಮಾಜದ ಎಲ್ಲ ಮುಖಂಡರ ಹಾಗೂ ಆಶಾ ಕಾರ್ಯಕರ್ತರ ಸಹಯೋಗದೊಂದಿಗೆ ಒಂದು ವಾರದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.

ತಾಲೂಕಾ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಆರೋಗ್ಯವಾಗಿರಬೇಕಾದರೆ ಮೊದಲು ನಮ್ಮ ಮನೆಯಲ್ಲಿರುವ 60 ವರ್ಷದ ವೃದ್ದರಿಗೆ ಲಸಿಕೆ ಹಾಕಿಸಿ ಆರೋಗ್ಯವಂತರಾಗಿ ಮಾಡಬೇಕು ಎಂದರು.

ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಕೊರೊನಾ ಓಡಿಸಲು ಜಾಗೃತಿ ಅವಶ್ಯ ಜೊತೆಗೆ ಎಲ್ಲ ಸಹಕಾರ, ನಿಯಮಗಳ ಪಾಲನೆ ಅವಶ್ಯ ಎಂದರು.

ಪುರಸಭೆ ಮುಖ್ಯಾಧಿಕಾರಿ ಎಂ ವಿ ಹಿರೇಮಠ ಮಾತನಾಡಿ ಕೊರೊನಾ ಎರಡನೆಯ ಅಲೆಯನ್ನು ಇಗಿನಿಂದಲೆ ಎಚ್ಚೆತ್ತುಕೊಂಡು ನಿಭಾಯಿಸಿದರೆ ತಾಲೂಕಿನ ಲಸಿಕಾ ಕಾರ್ಯಕ್ರಮದ ಗುರಿ ತಲುಪಬಹುದಾಗಿದ್ದು ಇದರೊಂದಿಗೆ ಕಾಳಜಿಯು ಸಹ ಮುಖ್ಯವಾಗಿದೆ ಎಂದರು.

ಪುರಸಭೆ ಸದಸ್ಯರಾದ ದಯಾನಂದ ಅಕ್ಕಿ, ರಮೇಶ ವನಹಳ್ಳಿ, ಮುಖಂಡರಾದ ಶರೀಫಸಾಬ್ ನಧಾಪ್, ಮುನ್ನಾ ಬಿಸ್ತಿ, ರೇಣುನಕನಗೌಡ ಪಾಟೀಲ್, ಶಿವರಾಜ ರಾಯಣ್ಣವರ, ಕಾಶಿನಾಥ ಕಳ್ಳಿಮನಿ, ವಿನಯ ಮುಂಡಗೋಡ, ಪ್ರತೀಕ ಕೋಳೆಕಾರ, ಚೆತನ ಕಲಾಲ್, ಸಚಿನ್ ಮಡಿವಾಳರ, ನಂದಿಶ ಲಂಡೆತ್ತಿನವರ, ಬಸವರಾಜ ಗೊಬ್ಬಿ, ಭಾರತಿ ರಾಮಪೂರಮಠ ಸೇರಿದಂತೆ ಜಾನಪದ ಕಲಾವಿದರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.

ಸುದ್ದಿ ಓದಿ