ಶಿಗ್ಗಾವ್

ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸೋಣ: ಮ್ಯಾಗೇರಿ

ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸೋಣ: ಮ್ಯಾಗೇರಿ

ಶಿಗ್ಗಾವಿ 11: ತಾಲೂಕಿನ ಪ್ರತಿಯೊಂದು ಮನೆ ಮನೆಗೆ ತ್ರಿವರ್ಣ ಧ್ವಜ ಗೌರವದಿಂದ ಕೊಟ್ಟು ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ಪಟ್ಟಣದ ಸವಣೂರ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ  ಸಭಾಂಗಣದಲ್ಲಿ  ಪದಾಧಿಕಾರಿಗಳಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸಿ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು ತಾಲೂಕಿನ  ಪ್ರತಿಯೊಂದು ಮನೆಮನೆಗೂ ನಾವೆಲ್ಲರೂ ತೆರಳಿ ಧ್ವಜ ನೀಡಿ ನೀಟಾದ ಕಂಬಕ್ಕೆ ಕ್ರಮಬದ್ಧವಾಗಿ ಇದೇ ದಿನಾಂಕ ಆಗಸ್ಟ್‌ 13ರಂದು ಬೆಳಿಗ್ಗೆ ಆರು ಗಂಟೆಯಿಂದ 10 ಗಂಟೆಯ ಒಳಗಾಗಿ ಪ್ರತಿಯೊಂದು ಮನೆ ಮೇಲೆ ಧ್ವಜಾರೋಹಣ ಮಾಡಬೇಕು ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಿ ಗೌರವಿಸಬೇಕು ಎಂದರು. 

ಯುವಕರು ಇದೇ ದಿನಾಂಕ 14 ರಂದು ಬೆಳಿಗ್ಗೆ 10 ಗಂಟೆಗೆ ಬೈಕ್‌ರಾ​‍್ಯಲಿ ಮುಖಾಂತರ ತ್ರಿವರ್ಣ ಧ್ವಜ ಕಟ್ಟಿಕೊಂಡು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸೋಣ ಹಾಗೂ ರೈತರು ಚಕ್ಕಡಿ ಮುಖಾಂತರ ರಾಷ್ಟ್ರಧ್ವಜ ಕಟ್ಟಿ ಮೆರವಣಿಗೆ ಮಾಡಲು ಸಿದ್ಧರಾಗಿದ್ದಾರೆ ಅವರೊಂದಿಗೆ ನಾವೆಲ್ಲರೂ ಏರಿ ವಿಜ್ರಂಭಿಸೋಣ ನಮ್ಮ ನಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡಿ ಸ್ವಾತಂತ್ರ ಅಮೃತ ಮಹೋತ್ಸವ ಅದ್ದೂರಿಯಾಗಿ ಆಚರಿಸೋಣ ಎಂದರು. ಈ ಸಂದರ್ಭದಲ್ಲಿ ಕೆ.ಎಂ.ಎಫ ನಿರ್ದೇಶಕ ಬಸನಗೌಡ ಮೇಲಿನಮನಿ, ಬಸವರಾಜ ನಾರಾಯಣಪೂರ, ಕಾಶೀನಾಥ ಕಳ್ಳಿಮನಿ, ಸಂತೋಷ ದೊಡ್ಡಮನಿ, ಪುರಸಭೆ ಗ್ರಾಮ ಪಂಚಾಯಿತಿ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮಂಡಲದ ಪದಾಧಿಕಾರಿಗಳು ಶಕ್ತಿ ಕೇಂದ್ರ ಮಹಾಶಕ್ತಿ ಕೇಂದ್ರ ಹಾಗೂ ಭೂತಗಳ ಕಾರ್ಯಕರ್ತರು ಹಿರಿಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ