ಅಮೃತ ಸ್ವಾತಂತ್ರೋತ್ಸವ ಹಬ್ಬದಂತೆ ಆಚರಿಸೋಣ: ತಹಶೀಲ್ದಾರ ಗೋಟೂರ
ತಾಳಿಕೋಟಿ06: ನಮ್ಮ ದೇಶಕ್ಕೆ ಸ್ವಾತಂತ್ರ್ಯೆ ದೊರಕಿ 75 ವರ್ಷಗಳಾಗುತ್ತಿವೆ ಇದರ ಅಂಗವಾಗಿ ಈ ಬಾರಿ ನಡೆಯುತ್ತಿರುವ ಸ್ವಾತಂತ್ರೋತ್ಸವ ಕೆವಲ ಒಂದು ಸಂಪ್ರದಾಯ ಆಚರಣೆಯ ದಿನವಾಗಿರದೆ, ಅಮೃತ ಸ್ವಾತಂತ್ರೋತ್ಸವದ ಸ್ಮರಣಿಯ ವರ್ಷವಾಗಿದೆ. ನಾವೇಲ್ಲರೂ ಈ ದಿನವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸೋಣ ಎಂದು ತಹಶೀಲ್ದಾರ ಶ್ರೀಧರ ಗೋಟೂರ ತಿಳಿಸಿದರು.
ಶನಿವಾರ ಪಟ್ಟಣದ ವಿಠ್ಠಲ ಮಂದಿರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೊತ್ಸವದ ಹಿನ್ನಲೆಯಲ್ಲಿ “ಹರ್ ಘರ್ ತಿರಂಗಾ” ಅಭಿಯಾನ ಕಾರ್ಯಕ್ರಮ ಯಶಸ್ವಿ ಕುರಿತು ಕರೆದ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಅಮೃತ ಮಹೋತ್ಸವ “ಹರ್ ಘರ್ ತಿರಂಗಾ” ಹೆಸರಿನಲ್ಲಿ ಕೆಂದ್ರದಿಂದ 13 ರಿಂದ 15ರ ವರೆಗೆ ಹಾಗೂ ರಾಜ್ಯ ಸರ್ಕಾರದಿಂದ 11 ರಿಂದ 17ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮ ಪ್ರತಿಯೊಂದು ಮನೆಯ ಮನದ ಕಾರ್ಯಕ್ರಮ ಆಗಬೇಕು, ಸ್ವಾತಂತ್ರೋತ್ಸವದ ದಿನದಂದು ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಬೇಕು. ಇದಕ್ಕಾಗಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ದಿಪಾಲಂಕಾರದ ವ್ಯವಸ್ಥೆ ಮಾಡಬೇಕು ಅದೇ ರೀತಿ ಎಲ್ಲ ಸರ್ಕಾರಿ ಕಛೇರಿಗಳನ್ನು ತಳಿರು-ತೋರಣ, ರಂಗೋಲಿ, ವಿದ್ಯುತ ದಿಪಗಳಿಂದ ಅಲಂಕರಿಸಬೇಕು. ಆ.15ರಂದು ಬೆಳಿಗ್ಗೆ 7:45ರ ವಳಗೆ ಎಲ್ಲ ಸರ್ಕಾರಿ ಅರೆ ಸರ್ಕಾರಿ ಕಛೇರಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನಡೆಸಬೇಕು ಬಳಿಕ ಮುಂಜಾನೆ 8:15ಕ್ಕೆ ತಾಲೂಕಾಡಳಿತ ವತಿಯಿಂದ ಧ್ವಜಾರೋಹಣ ನೇರವೆರುವುದು ಕೊವಿಡ್ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು ಇದೆ ಸಂದರ್ಭದಲ್ಲಿ ಮಾನ್ಯ ಶಾಸಕರು ಹಮ್ಮಿಕೊಂಡಿರುವ ಯುವ ಜನ ಸಂಕಲ್ಪ ನಡಿಗೆ ಆ.12ಕ್ಕೆ ಪಟ್ಟಣಕ್ಕೆ ಆಗಮಿಸಿ ಸಮಾರೋಪಗೊಳ್ಳಲಿದೆ. ಈ ಕಾರ್ಯಕ್ರಮವನ್ನು ನಾವೇಲ್ಲರೂ ಯಶಸ್ವಿಗೊಳಿಸಬೇಕಾಗಿದೆ.
ಸಭೆಯಲ್ಲಿ ಉಪಸ್ಥಿತರಿದ್ದ ಪಟ್ಟಣದ ಗಣ್ಯರು ಕಾರ್ಯಕ್ರಮದ ಯಶಸ್ವಿಗೆ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಇಓ ಬಲವಂತ್ರಾಯಗೌಡ ಬಿರಾದಾರ, ಅಬಕಾರಿ ಅಧಿಕಾರಿ ಜ್ಯೋತಿ ಮೇತ್ರಿ, ಪಿಎಸ್ಐ ರಂಗಪ್ಪ ಭಂಗಿ, ಕೆಪಿಸಿಸಿ ಸದಸ್ಯ ಬಿ ಎಸ್ ಪಾಟೀಲ ಯಾಳಗಿ, ಶಿದ್ಧನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಬಿಜೆಪಿ ನಗರ ಅಧ್ಯಕ್ಷ ರಾಘವೇಂದ್ರ ಚೌಹಾಣ, ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಬಿಜೆಪಿ ಮುಖಂಡ ಶಿವಶಂಕರ ಹಿರೇಮಠ, ಮಾಸೂಮಸಾಬ ಕೆಂಭವಿ, ಕೆ ಎಂ ಡೋಣಿ, ಪುರಸಭೆ ಸದಸ್ಯ ಜಯಸಿಂಗ ಮೂಲಿಮನಿ, ಮಂಜುನಾಥ ಶೇಟ್ಟಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಕಾಲೇಜುಗಳ ಮುಖ್ಯಸ್ಥರು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಗರದ ಗಣ್ಯರು ಉಪಸ್ಥಿತರಿದ್ದರು.