ಕಾರವಾರ

ರೈಲ್ವೆಗೆ ಸಿಲುಕಿ ಚಿರತೆ ಸಾವು

ರೈಲ್ವೆಗೆ ಸಿಲುಕಿ ಚಿರತೆ ಸಾವು

ಕಾರವಾರ  20: ತಾಲೂಕಿನ ಚೆಂಡಿಯಾ ಗ್ರಾಮದ ಭಜನಕೇರಿಯಲ್ಲಿ ಮಾರ್ಚ 20 ಶನಿವಾರದಂದು ಮಧ್ಯಾಹ್ನ ವೆಳೆಗೆ ಕೊಂಕಣರೈಲ್ವೆ ಮಾರ್ಗದರೈಲ್ವೆ ಗೆ ಸಿಲುಕಿದ 3 ವರ್ಷದ ಒಂದು ಗಂಡು ಚಿರತೆ ಸಾವಿಗಿಡಾಗಿದೆ ಎಂದು ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣಕುಮಾರ, ವಲಯಅರಣ್ಯಾಧಿಕಾರಿ ಜಿ.ವಿ.ನಾಯ್ಕ್, ಪಶು ವೈಧ್ಯಾಧಿಕಾರಿ, ಕೊಂಕಣರೈಲ್ವೆ ಸೆಕ್ಷನ್‍ಇಂಜಿನೀಯರ ಒಳಗೊಂಡಂತೆ ಪಂಚರ ಸಮ್ಮುಖದಲ್ಲಿಚಿರತೆಯ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಯಿತೆಂದು ಅವರು ಮಾಹಿತಿ ನಿಡಿದ್ದಾರೆ. 

ಕಾರವಾರ ಉಪಸಂರಕ್ಷಣಾಧಿಕಾರಿಯವರ ಆದೇಶದಂತೆ ಚಿರತೆಯ ಕಳೇಬರವನ್ನು ದಹಿಸಲು ಸೂಕ್ತ ಕ್ರಮ ಜರುಗಿಸಲಾಯಿತು. ನಂತರ ಕೊಂಕಣ ರೈಲ್ವೆ ಹಳಿಗಳ ಮೇಲೆ ವನ್ಯಪ್ರಾಣಿಗಳಾದ ಚಿರತೆ, ಕಡವೆ, ಕಾಡು ಹಂದಿಗಳು ಸಾವನ್ನಪ್ಪುತ್ತಿರುದುಕಂಡು ಬಂದಿದ್ದು, ಅರಣ್ಯಇಲಾಖೆಯಿಂದ ಅವಗಡಗಳನ್ನು ತಡೆಗಟ್ಟಲು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಪ್ರಸ್ತಾವನೆಯನ್ನು ತಯಾರಿಸಿ ಕೆ.ಆರ್.ಸಿ.ಎಲ್ ರವರಿಗೆ ಕಳುಹಿಸುವ ಕುರಿತಂತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತೆಂದುಅವರು ಹೆಳಿದ್ದಾರೆ.

ಸುದ್ದಿ ಓದಿ