ಗೋವಿನಜೋಳ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ
ರಾಣೆಬೆನ್ನೂರು 18: ಜಾಗೃತಕೋಶ, ಬೆಳಗಾವಿ, ಉಪ ಕೃಷಿ ನಿರ್ದೇಶಕರು-2, ಜಾಗೃತದಳ ಹಾಗೂ ಕೃಷಿ ಅಧಿಕಾರಿಗಳ ತಂಡದೊಂದಿಗೆ ರಾಣೆಬೆನ್ನೂರ ನಗರದಲ್ಲಿ ವಿವಿಧ ಬೀಜ ಕೃಷಿ ಪರಿಕರಗಳ ಮಳಿಗೆಗೆ ತಪಾಸಣೆ ಕೈಗೊಂಡು ಮಲ್ಲಿಕಾರ್ಜುನ ಸೀಡ್ಸ್ ಸೆಂಟರ್ ರಾಣೆಬೆನ್ನೂರು ಮಾಲಿಕತ್ವದ ಅನಧೀಕೃತ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದು 1220 ಕೆ.ಜಿ ಗೋವಿನಜೋಳ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ.
ವಾಹನ (ಕೆಎ 35ಸಿ 7997)ದಲ್ಲಿ ಸಂಗ್ರಹಿಸಿದ್ದ ಸಂಶಯಾತ್ಮಕ 37 ಚೀಲಗಳನ್ನು ಅಂದಾಜು 1850 ಕೆ.ಜಿ ಗೋವಿನಜೋಳ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಿ ಪ್ರಥಮ ವರ್ತಮಾನ ವರದಿಯನ್ನು ಶಹರ ಪೊಲೀಸ್ ಠಾಣೆ ರಾಣೇಬೆನ್ನೂರನಲ್ಲಿ ದಾಖಲಿಸಲಾಗಿದೆ. ಗೋವಿನಜೋಳ ಬಿತ್ತನೆ ಬೀಜ ಜಪ್ತಿ ಮಾಡಿದ ಸಂದರ್ಭದಲ್ಲಿ ಜಿಲಾನಿ ಮೊಕಾಶಿ, ಜಂಟಿ ಕೃಷಿ ನಿರ್ದೇಶಕರು ಹಾಗೂ ಬಿ ವೆಂಕಟರಮಣಪ್ಪ, ಉಪ ಕೃಷಿ ನಿರ್ದೇಶಕರು, ಜಾಗೃತ ಕೋಶ ಬೆಳಗಾವಿ, ಜಿ ಸ್ಪೂರ್ತಿ, ಉಪ ಕೃಷಿ ನಿರ್ದೇಶಕರು-2, ರಾಣೇಬೆನ್ನೂರು, ಹಿತೇಂದ್ರ ಗೌಡಪ್ಪಳವರ, ಸಹಾಯಕ ಕೃಷಿ ನಿರ್ದೇಶಕರು, ರಾಣೇಬೆನ್ನೂರ, ಶಿವಲಿಂಗಪ್ಪ ವಿ.ಕೆ, ಹಾಗೂ ಕೆ.ಎನ್.ಮಹಾರಡ್ಡಿ, ಸಹಾಯಕ ಕೃಷಿ ನಿರ್ದೇಶಕರು, ಅರವಿಂದ ಎಂ. ಹಾಗೂ ವಿರೇಶ ಜೆ.ಎಂ. ಕೃಷಿ ಅಧಿಕಾರಿಗಳು ಹಾಜರಿದ್ದರು.