ಕಾನೂನು ಸಾಕ್ಷರತಾ ಕಾರ್ಯಕ್ರಮ
ಬ್ಯಾಡಗಿ 15:ಚಿಕಿತ್ಸೆಗೆ ಒಳಗಾಗಿರುವ ಮಾನಸಿಕ ಅಸ್ವಸ್ಥರು ಯಾವುದೇ ಅವಮಾನಕ್ಕೆ(ದೈಹಿಕ, ಮಾನಸಿಕ)ಅಥವಾ ಕ್ರೌರ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು, ಅವರಿಗೆ ಒಪ್ಪಿಗೆಯಿಲ್ಲದೇ ನಡೆಯುವ ಯಾವುದೇ ಪ್ರಕ್ರಿಯೆಗಳು ಕಾನೂನಿಡಿಯಲ್ಲಿ ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಟಿ.ಸತೀಶ ತಿಳಿಸಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸ್ಥಳೀಯ ನ್ಯಾಯಾಲಯ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆ ಉದ್ದೇಶಗಳಿಗೆ ಬಳಸುವಂತಿಲ್ಲ:ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ರಕ್ಷಣೆ ಮತ್ತು ಮಾನಸಿಕ ಆರೋಗ್ಯದ ಸುಧಾರಣೆಗೆ ಅದರದೇ ಆದ ತತ್ವಗಳಿವೆ ಮಾನಸಿಕ ಅಸ್ವಸ್ಥರನ್ನು ಸಂಶೋಧನೆಯ ಉದ್ದೇಶಗಳಿಗೆ ಬಳಸು ವುದೂ ಸಹ ಶಿಕ್ಷಾರ್ಹ ಅಪರಾಧವಾಗಿದ್ದು ಇವುಗಳನ್ನು ಹೊರತುಪಡಿಸಿಯೂ ಯಾರೊಬ್ಬರು ಮಾನಸಿಕ ಅಸ್ವಸ್ಥರನ್ನು ಕಡೆಗಣಿಸದಂತೆ ಸಲಹೆ ನೀಡಿದರು.
ಸಮಸ್ಯೆಗಳಿಲ್ಲದ ಜೀವನವಿಲ್ಲ:ಮನೋರೋಗ ತಜ್ಞ ಡಾ.ವಿಜಯಕುಮಾರ ಬಳಿಗಾರ ಮಾತನಾಡಿ, ಪ್ರತಿಯೊಬ್ಬರ ಬದುಕಿನ ಲ್ಲಿಯೂ ಸಮಸ್ಯೆಗಳಿರುತ್ತವೆ, ಪ್ರೇಮ ವೈಫಲ್ಯ ಕುಟುಂಬದೊಳಗಿನ ಜನರಿಂದ ಸೂಕ್ತ ಸ್ಪಂದನೆ, ಅಪ ಯಶಸ್ಸು, ಒತ್ತಡದ ಬದುಕು, ಅಸಹಕಾರ, ಹೊಂದಾಣಿಕೆ ಕೊರತೆ ಇತ್ಯಾದಿಗಳು ಉದ್ಭವಿಸಿದಾಗ ಮನುಷ್ಯನ ದೇಹದಲ್ಲಿ ನರಗಳ ದೌರ್ಬಲ್ಯ ಉಂಟಾಗಿ ಮಾನಸಿಕ ಸಮತೋಲನದಲ್ಲಿ ವ್ಯತ್ಯಾಸವಾಗಲಿದೆ ಇವೆಲ್ಲವೂ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಲಿದ್ದು ಇಂತಹ ಸಂದಿಗ್ಧ ವೇಳೆಯಲ್ಲಿ ಯಾರೊಬ್ಬರು ದುಡುಕಿನ ನಿರ್ಧಾರ ತೆಗೆದುಕೊಳ್ಳದೇ ತಾಳ್ಮೆಯಿಂದ ವರ್ತಿಸುವಂತೆ ಸಲಹೆ ನೀಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶ ಸುರೇಶ್ ವಗ್ಗನವರ, ಸರ್ಕಾರಿ ಸಹಾಯಕ ಅಭಿಯೋಜಕ ರಾಜಣ್ಣ ನ್ಯಾಮತಿ, ಕೆ.ಆರ್.ಲಮಾಣಿ, ಪಿ.ಆರ.ಮಠದ, ವಿ.ಎಸ್.ಕಡಗಿ, ಬಿ.ಎಸ್.ಚೂರಿ, ಎಂ.ಎಫ್.ಮುಳಗುಂದ, ಎಂ.ಜೆ.ಮುಲ್ಲಾ, ಆರ್.ವಿ.ಬೆಳಕೇರಿಮಠ, ಪಿ.ಸಿ.ಶೀಗಿಹಳ್ಳಿ ಎಂ. ಪ್ರಶಾಂತ, ಬಿ.ಜಿ.ಹಿರೇಮಠ, ಎಂ.ಪಿ.ಹಂಜಗಿ, ಎನ್.ಬಿ.ಬಳಿಗಾರ, ಇದ್ದರು.