ಯರಗಟ್ಟಿ

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಉಪನ್ಯಾಸ ಸರಣಿ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಉಪನ್ಯಾಸ ಸರಣಿ ಕಾರ್ಯಕ್ರಮ

ಯರಗಟ್ಟಿ 31: ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಶಿವಲಿಂಗ ಶಿವಾಚಾರ್ಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಜರುಗಿದ ಉಪನ್ಯಾಸ ಸರಣಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು.

ಪ್ರಾಸ್ತಾವಿಕವಾಗಿ ಅರವಿಂದಗೌಡ ಪಾಟೀಲ ಮಾತನಾಡಿ,  ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಮಹಾನ್ ಕವಿಗಳು, ಸಾಹಿತ್ಯಗಳು ತಮ್ಮದೇ ವಿಶಿಷ್ಟ ಸಂಸ್ಕೃತಿಯಿಂದ ಗಮನ ಸೆಳೆದಿವೆ.  ಕನ್ನಡ ಸಾಹಿತ್ಯಕ್ಕೆ ಕಾಲಘಟ್ಟಗಳಲ್ಲೂ ಬೆಲೆ ಇದೆ ಎಂದರು.ಡಾ. ಎಸ್‌. ಎಸ್‌. ಅಂಗಡಿ ಬದಕು-ಬರಹದ ಕುರಿತು ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಎನ್‌. ಬಿ. ತೋರಣಗಟ್ಟಿ ಅವರು ಎಸ್‌. ಎಸ್‌. ಅಂಗಡಿ ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ಜನಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ​‍್ಣ', 'ಕನ್ನಡ ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ ಪ್ರಸ್ತುತ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಅಂಗಡಿ ಅವರಿಗೆ ಅಥಣಿ ಲಿಂಗರಾಜ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜೋತ್ಸವ ಪ್ರಶಸ್ತಿ, ಮೈಸೂರಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗಳು ಸಂದಿವೆ ಎಂದು ಹೇಳಿದರು.ನಂತರ ಉಪನ್ಯಾಸ ಡಾ. ಕುಮಾರ ದಾಸರ ಮಾತನಾಡಿದ ಅವರು 20 ಜುಲೈ,1940ರಲ್ಲಿ ಜನಿಸಿದ ನಾಗಲೋಟಿಮಠರವರಿಗೆ ಜನಿಸಿದಾಗ ಸದಾಶಿವಯ್ಯ ಎಂದು ಹೆಸರಿಡಲಾಯಿತು.ಇವರ ತಂದೆ ಜಂಬಯ್ಯನವರು ನರಗುಂದ ತಾಲೂಕಿನ ಶಿರೋಳ ಗ್ರಾಮದವರು. ನಾಗಲೋಟಿಮಠರವರು ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣವನ್ನು ಸದಾಶಿವ ಬನಹಟ್ಟಿಯಲ್ಲಿ ಪೂರೈಸಿದರು. ವೈದ್ಯ ಶಿಕ್ಷಣವನ್ನು ಇವರು ಹುಬ್ಬಳ್ಳಿಯ ಕೆ.ಎಂ.ಸಿ ಯಲ್ಲಿ ಪೂರೈಸಿದರು ಹಾಗು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು.ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿ, ವಿಶ್ವಾದ್ಯಂತ ಮನ್ನಣೆಗಳಿಸಿದ್ದಾರೆ. ತಳ ಶೇಖರಣೆ ಜೀವಕೋಶ ವಿಜ್ಞಾನ  ಹಾಗೂ ಸಾಂದರ್ಭಿಕ ಮಧುಮೇಹ ಎಂಬ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೊತ್ತಮೊದಲ ಲೇಖನಗಳಿಗೆ ಕಾರಣಕರ್ತರಾಗಿದ್ದಾರೆ.

ನಾಗಲೋಟಿಮಠರವರು ಹುಬ್ಬಳ್ಳಿಯ ಕಿಮಸ್ ನ ಪ್ರಥಮ ಅಧ್ಯಕ್ಷರಾಗಿದ್ದರು. ಇವರು ಭಾರತದಲ್ಲೇ ಅತಿ ದೊಡ್ಡ ದೇಹದ ಹರಳುಗಳ ವಸ್ತು ಸಂಗ್ರಹಾಲಯವನ್ನು ಬಿಜಾಪುರದಲ್ಲಿ ಸ್ಥಾಪಿಸಿದರು. ಬೆಳಗಾವಿಯಲ್ಲಿ ಇವರು ಸ್ಥಾಪಿಸಿರುವ ಪ್ಯಾಥಾಲಜಿ ಮ್ಯೂಸಿಯಂ ಕೂಡ ಪ್ರಸಿದ್ದವಾಗಿದೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಶ್ರೀಸಾಮಾನ್ಯ ಮತ್ತು ವೈದ್ಯ), ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ (ಶ್ರೀಸಾಮಾನ್ಯ ಮತ್ತು ವೈದ್ಯ), ಡಾ??ಬಿ. ಸಿ. ರಾಯ್ ಪ್ರಶಸ್ತಿ, ಭಾರತದ ಶ್ರೇಷ್ಠ ಪೌರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಾಳುಕ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ ಎಂದರು.ಈ ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಂಗಾರೆಪ್ಪ ಹರಳಿ, ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಪ್ರಾಚಾರ್ಯರ ವಿವೇಕ ದಿವಟೆ, ಬಿ. ಎಸ್‌. ದೊಡ್ಡಮನಿ, ಎಸ್‌.ಡಿ.ಎಂ.ಸಿ ಸದಸ್ಯರಾದ ಮಲ್ಲಯ್ಯ ಹಿರೇಮಠ, ಈರಣ್ಣಾ ಹೊಸಮನಿ, ಕುಮಾರ ಜಕಾತಿ, ಈರಣ್ಣಾ ಹುಲ್ಲೂರ, ಬಿ. ಎಂ. ಬಿಷ್ಟನ್ನವರ,ಹರಳಿಸರ್,  ಸೇರಿದಂತೆ ಅನೇಕರು ಇದ್ದರು. ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು 


ಸುದ್ದಿ ಓದಿ