ಶಿಗ್ಗಾವ್

ಕ್ರಿಕೆಟ್ ಪ್ರತಿಭೆಗಳಿಗೆ ಲೇದರ್ ಮ್ಯಾಟ್ ಕಾರ್ಯಕ್ರಮ

ಕ್ರಿಕೆಟ್ ಪ್ರತಿಭೆಗಳಿಗೆ ಲೇದರ್ ಮ್ಯಾಟ್ ಕಾರ್ಯಕ್ರಮ

ಶಿಗ್ಗಾವಿ 12: ತಾಲೂಕಿನಲ್ಲಿ ಲೆದರಬಾಲ್ ಆಡಲು ಅವಕಾಶ ವಂಚಿತರಾಗಿದ್ದ ತಾಲೂಕಿನ ಕ್ರಿಕೆಟ ಪ್ರತಿಭೆಗಳಿಗೆ ಅನುಕೂಲವಾಗಲೆಂದು ಲೇದರ ಮ್ಯಾಟ್‍ನ್ನು ಹಾಕಿಸಿಲಾಯಿತು ಎಂದು ಶಿಗ್ಗಾವಿ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಉಮೇಶ ಗೌಳಿ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಲೇದರ್ ಮ್ಯಾಟ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ತಾಲೂಕಿನ ಅನೇಕ ಕ್ರಿಕೇಟ ಪ್ರತಿಭೆಗಳಿದ್ದು ಅವರ ಪ್ರತಿಭೆಯನ್ನು ಹೊರಹಾಕಲು ಆರ್ಥಿಕ ತೊಂದರೆ ಹಾಗೂ ಲೇದರ ಮ್ಯಾಟನ ಅವಶ್ಯಕತೆಯಿತ್ತು ಅದನ್ನು ಮನಗಂಡು 18 ಸಾವಿರ ರೂಗಳ ವೆಚ್ಚದಲ್ಲಿ ಲೇದರ ಮ್ಯಾಟ್ ನೆಟ್ ಪ್ರಾಕ್ಟೀಸ ಮಾಡಲು ಅನುಕೂಲವಾಗಲೆಂದು ಶಿಗ್ಗಾವಿ ಸ್ಪೋಟ್ಸ್ ಕ್ಲಬ್ ಅಕಾಡೆಮಿ ರಚನೆ ಮಾಡಿ ಕ್ರಿಕೇಟ ಪಟುಗಳಿಗೆ ಲೇದರಬಾಲ ತರಬೇತಿ ನೀಡಿ ಮುಂದಿನ ದಿನಗಳಲ್ಲಿ ಲೇದರ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.

ಹಿರಿಯ ಕ್ರೀಡಾಪಟು ಮೋಹನ ಸಂಶಿ ಮಾತನಾಡಿ ತಾಲೂಕಿನಲ್ಲಿ ಸುಮಾರು 35 ಕ್ರಿಕೇಟ ಕ್ರೀಡಾಪಟುಗಳು ಲೇದರ ತರಬೇತಿ ಪಡೆಯುತ್ತಿದ್ದರು ಅವರಿಗೆ ಲೇದರ ಮ್ಯಾಟ ಇಲ್ಲದ ಕಾರಣ ಅವರು ತಮ್ಮ ಸಮಸ್ಯೆಗಳನ್ನು ನಮಗೆ ಹೇಳುತ್ತಿದ್ದರು ಆದರೆ ಇಂದು ಉಮೇಶ ಗೌಳಿಯವರ ಮುಖಾಂತರ ಸಾಕಾರಗೊಂಡು ಕ್ರೀಡಾಪಟುಗಳಿಗೆ ಉತ್ಸಾಹ ಬಂದೊಂದಗಿದೆ ಎಂದರು.

ಹಿರಿಯ ಕ್ರಿಕೇಟ ಆಟಗಾರ ಆನಂದ ದಾನಿ ಮಾತನಾಡಿ ತಾಲೂಕಿನಲ್ಲಿ ನಮಗೆ ಲೇದರ ಮ್ಯಾಟ ಇಲ್ಲದ ಕಾರಣ ನಾವು ಟೆನ್ನಿಸಬಾಲ್ ಆಡುತ್ತಿದ್ದೇವು ಆದರೆ ಇಂದಿನ ಯುವಕರಿಗೆ ಈ ಸೌಭಾಗ್ಯ ದೊರಕಿರುವುದು ನಿಮ್ಮ ಅದೃಷ್ಟ ಎಂದರು.

ಈ ಸಂದರ್ಭದಲ್ಲಿ ಜಗದೀಶ ಬನ್ನಿಕೊಪ್ಪ, ಚಂದ್ರು ಜವಳಿ, ಭರತ , ಸಾಧಿಕ ಸವಣೂರ, ಭಗವಾನಸಿಂಗ್ ಸೇರಿದಂತೆ ಕ್ರೀಡಾ ಪಟುಗಳು ಇದ್ದರು.

ಸುದ್ದಿ ಓದಿ