ಶಿಗ್ಗಾವ್

ಕಲಾವಿದರು ಶ್ರದ್ಧಾ ಭಕ್ತಿಯಿಂದ ಕಲೆಯನ್ನು ಕರಗತ ಮಾಡಿಕೊಳ್ಳಿ: ಮಾತಾ ಮಂಜಮ್ಮ

ಕಲಾವಿದರು ಶ್ರದ್ಧಾ ಭಕ್ತಿಯಿಂದ ಕಲೆಯನ್ನು ಕರಗತ ಮಾಡಿಕೊಳ್ಳಿ: ಮಾತಾ ಮಂಜಮ್ಮ

ಶಿಗ್ಗಾವಿ 22: ಪ್ರತಿಯೊಂದು ಕಲೆಯು ಸಹಿತ ಗುರುವಿನ ಆರ್ಶಿವಾದದಿಂದ ಹಾಗೂ ಕಲಾವಿದನ ಶ್ರದ್ಧಾ ಭಕ್ತಿಯಿಂದ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಹೇಳಿದರು.

ತಾಲೂಕಿನ ಬಾಡ ಗ್ರಾಮದ ಕನಕದಾಸ ಅರಮನೆ ಅವರಣದ ಪ್ರಾಗಂಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರ ಇವರ ಆಶ್ರಯದಲ್ಲಿ ನೆಡೆದ ಚರ್ಮ ವಾದ್ಯ ತರಬೇತಿ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಕಡು ಬಡತನ ಪರಿಸ್ಥಿತಿ 1985 ರಿಂದ ಸೀರೆ ಉಟ್ಟು ಜೋಗುತಿ ಪದ ಹೇಳುತ್ತಾ ನಮ್ಮ ಗ್ರಾಮಕ್ಕೆ ಸೀಮಿತವಾಗಿದ್ದೆ, ನಮ್ಮ ಕೆಲವು ಕಲಾವಿದರು ನನ್ನ ಪ್ರತಿಭೆಯನ್ನು ನೋಡಿ ಈತರಹದ ತರಬೇತಿಗಳನ್ನು ಪಡೆಯಲು ಶಿಫಾರಸ್ಸು ಮಾಡಿದರೂ ಆದರ ಪ್ರತಿಫಲವೇ ಈಗ ನಾನು ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿರುವುದು ಸಂತಸ ತಂದಿದೆ ಆದರೆ ಅಧಿಕಾರ ಶಾಶ್ವತವಲ್ಲ ಬರುತ್ತೇ ಹೋಗುತ್ತದೆ ಆದರೆ ಕಲೆ ಮಾತ್ರ ಅಜರಾಮರವಾಗಿರುತ್ತದೆ ಎಂದರು.

ಭಾ.ಜ.ಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮಾಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ ಮಾಣೋಜಿ ಮಾತನಾಡಿದರು.

ಈ ಕಾರ್ಯಾಗಾರದಲ್ಲಿ ತರಬೇತುದಾರ ಸಿದ್ದು ಮೋಟೆ, ಮಹೇಶ ಕಾಯಕದ, ಕುಮಾರಗೌಡ್ರ, ರಾಮಕ್ಕ, ಹೇಮಂತಕುಮಾರ ಭಜಂತ್ರಿ, ಗೂಳಪ್ಪ, ತಾಲೂಕ ಪಂಚಾಯತ ಅಧ್ಯಕ್ಷೆ ಪಾರವ್ವ ಆರೇರ, ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಕಾಕೋಳ, ಉಪಾಧ್ಯಕ್ಷೆ ಜನತ್ತಭೀ ಮುಲ್ಲಾ, ಸದಸ್ಯರಾದ ನಾಗರಾಜ ವೇಂಕೋಜಿ, ಭಂಕಪ್ಪ ಭಾರೀಗಿಡದ, ಸುರೇಶ ಚಿನ್ನಪ್ಪನವರ, ಶಕನಾಭಿ ಮುಲ್ಲಾ, ಪಿ.ಡಿ.ಓ ರಾಮಕೃಷ್ಣ ಗುಡಗೇರಿ, ರಮೇಶ ಸಾತಣ್ಣವರ, ಗುರುನಾಥ ಹುಬ್ಬಳ್ಳಿ ಸೇರಿದಂತೆ ಗ್ರಾಮಸ್ಥರು ಹಾಗೂ ಧಾರವಾಡ ಮತ್ತು ಹಾವೇರಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಸ್ರಾವಿಕವಾಗಿ ಜಾನಪದ ಅಕಾಡೆಮಿ ಸದಸ್ಯ ಶಂಕರ ಅರ್ಕಸಾಲಿ, ಮಹಾರುದ್ರಪ್ಪ ಈಟಗಿ ಮಾತನಾಡಿದರು, ಜಾನಪದ ಅಕಾಡೆಮಿ ಪಶ್ರಸ್ತಿ ಪುರಸ್ಕೃತ ಬಸವರಾಜ ಶಿಗ್ಗಾವಿ ಸ್ವಾಗತಿಸಿದರು, ಪ್ರಾದ್ಯಾಫಕ ಶರೀಫ ಮಾಕಪ್ಪನವರ ನಿರೂಪಿಸಿದರು, ಪುಟ್ಟರಾಜ ಕವಿ ಗವಾಯಿ ಸಂಘದ ಅಧ್ಯಕ್ಷ ಪಕ್ಕಿರೇಶ ಕೊಂಡಾಯಿ ವಂದಿಸಿದರು.

ಸುದ್ದಿ ಓದಿ