ಭಾರತ 'ಜೋಡೊ’ ಯಶಸ್ವಿಗೊಳಿಸಲು ಮುಖಂಡರ ಕರೆ
ತಾಳಿಕೋಟಿ 24: ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರ ಸ್ಮರಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಆ. 26 ರಂದು ಹಮ್ಮಿಕೊಂಡಿರುವ ‘ಭಾರತ ಜೋಡೊ’ ಪಾದಯಾತ್ರೆ ಕಾರ್ಯಕ್ರಮ ಯಶಸ್ವಿಗೊಳಿಸಲು ದೇ.ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಬುಧವಾರ ಹೂವಿನ ಹಿಪ್ಪರಗಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರಿ್ಡಸಿದ್ದ ಭಾರತ ಜೋಡೊ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಈ ಪಾದಯಾತ್ರೆಗೆ ಯಾರಿಂದಲೂ ಹಣ ಸಂಗ್ರಹವನ್ನು ಮಾಡದೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದರ ಜವಾಬ್ದಾರಿಯನ್ನು ಹೊರಲು ನಿರ್ಧರಿಸಲಾಯಿತು.
ಈ ಪಾದಯಾತ್ರೆಯು ದೇ.ಹಿಪ್ಪರಗಿ ಮತಕ್ಷೇತ್ರದ ವಡವಡಗಿ ಗ್ರಾಮದಿಂದ ಆರಂಭವಾಗಿ ಸುಮಾರು 14 ಕಿ.ಮೀ. ಕ್ರಮಿಸಿ ಹೂವಿನ ಹಿಪ್ಪರಗಿಯ ಕು.ಸಾಲವಾಡಗಿ ರಸ್ತೆಯಲ್ಲಿರುವ ಸಂತೆಕಟ್ಟೆಯಲ್ಲಿ ಸಭೆಯಾಗಿ ಮಾರ್ಡಲಿದೆ. ಅಲ್ಲಿ ಸಂಜೆ 4 ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು, ಇದರಲ್ಲಿ ಜಿಲ್ಲೆಯ ನಾಯಕರುಗಳಾದ ಡಾ. ಎಂ.ಬಿ. ಪಾಟೀಲ, ಅಪ್ಪಾಜಿ ನಾಡಗೌಡ, ಶಿವಾನಂದ ಪಾಟೀಲ, ಯಶವಂತ್ರಾಯಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಮಾಜಿ ಶಾಸಕ ಎಸ್.ಎಂ. ದೇಸಾಯಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಮುಖಂಡರುಗಳಾದ ಸುಭಾಸ ಛಾಯಾಗೋಳ, ಬಿ.ಎಸ್. ಪಾಟೀಲ (ಯಾಳಗಿ), ಡಾ. ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡಮನಿ, ಗೌರಮ್ಮ ಮುತ್ತತ್ತಿ, ಸುಜಾತಾ ಕಳ್ಳಿಮನಿ, ಡಾ.ನಂದಕುಮಾರ ಭೈರಿ, ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ದೇ. ಹಿಪ್ಪರಗಿ ಬ್ಲಾಕ್ ಅಧ್ಯಕ್ಷ ಬಶೀರಅಹ್ಮದ್ ಬೇಪಾರಿ, ಸುರೇಶ ಬಾಬುಗೌಡ ಪೀರಾಪೂರ, ಬಾಪುಗೌಡ ಪಾಟೀಲ (ವಡವಡಗಿ), ಮಹಿಳಾ ಘಟಕದ ಅಧ್ಯಕ್ಷರುಗಳಾದ ಸರಿತಾ ನಾಯಕ, ರಮೀಜಾ ನದಾಫ ಇದ್ದರು.