ಯರಗಟ್ಟಿ

ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ವಕೀಲರ ಪ್ರತಿಭಟನೆ

ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ವಕೀಲರ ಪ್ರತಿಭಟನೆ

ಯರಗಟ್ಟಿ 22: ಬೆಂಗಳೂರಿನ ಹೊಸೂರು ನ್ಯಾಯವಾದಿ ಅವರ ಮೇಲೆ ಕಕ್ಷಿದಾರರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಪಟ್ಟಣದ  ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟಿಸಿ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ತಾಲೂಕಾ ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್‌. ಆರ್‌. ರೆಬ್ಬಣ್ಣವರ ಮಾತನಾಡಿ, ನ್ಯಾಯಾಲಯದ ಆವರಣದಲ್ಲೇ ವಕೀಲರ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಖಂಡನೀಯ. ವಕೀಲರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನ್ಯಾಯಾಲಯದಲ್ಲಿ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದರು. 

ರಾಜ್ಯ ವಕೀಲರ ಪರಿಷತ್ ಕರೆ ನೀಡಿರುವಂತೆ ಶನಿವಾರ ಎಲ್ಲ ವಕೀಲರು ಕೈಗಳಿಗೆ ಕೆಂಪು ಪಟ್ಟಿ ಧರಿಸಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲಾಗುವುದು ಎಂದು ತಿಳಿಸಿದರು. 

ಈ ವೇಳೆ ನ್ಯಾಯವಾದಿಗಳಾದ ವ್ಹಿ. ಜಿ. ಬಿರಾದಾರಪಾಟೀಲ, ಆರ್‌. ಎಸ್‌. ಆಲದಕಟ್ಟಿ, ಎಂ. ಎಂ. ಮಡಿವಾಳರ, ಎಸ್‌. ವ್ಹಿ. ಮಾಳಕ್ಕನ್ನವರ, ಎಸ್‌. ವ್ಹಿ. ಕಳ್ಳಿಗುದ್ದಿ, ಆರ್‌. ಬಿ. ಪಕಾಲಿ, ಎಸ್‌. ಎಂ. ಭರಮಗೌಡರ, ಅಶೋಕ ಹತ್ತಿ ಸೇರಿದಂತೆ ಅನೇಕ ನ್ಯಾಯವಾದಿಗಳು ಇದ್ದರು. 


ಸುದ್ದಿ ಓದಿ