ಯರಗಟ್ಟಿ

ಯುವ ಮತದಾರರ ನೋಂದಣಿ ಅಭಿಯಾನಕ್ಕೆ ಚಾಲನೆ

ಯುವ ಮತದಾರರ ನೋಂದಣಿ ಅಭಿಯಾನಕ್ಕೆ ಚಾಲನೆ

ಯರಗಟ್ಟಿ 02: ಪಟ್ಟಣದ ಎಸ್‌. ಬಿ. ಜಕಾತಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ಯರಗಟ್ಟಿ ತಹಶಿಲ್ದಾರ ಎಮ್‌. ಎನ್‌. ಮಠದ ಅವರ ನೇತ್ರತ್ವದಲ್ಲಿ ಯುವ ಮತದಾರರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ ಮುಂಬರಲಿರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿದೆ ಹಾಗಾಗಿ ಯುವ ಮತದಾರರು ಮತದಾನ ಪಟ್ಟಿಯಲ್ಲಿ 17 ವರ್ಷ ಮೇಲ್ಪಟ್ಟ ಎಲ್ಲಾ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಹೇಳಿದರು.  ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಡಿ. ಎನ್‌. ತಹಶೀಲ್ದಾರ, ಗ್ರಾಮ ಆಡಳಿತ ಅಧಿಕಾರಿಗಳ ಎಲ್‌. ಬಿ. ದಳವಾಯಿ, ಶಿರಸ್ತೇದಾರ ಎಸ್‌. ಬಿ. ಕುಲಕರ್ಣಿ, ಪ್ರಾಚಾರ್ಯರಾದ ಡಿ ಎಸ್ ಗುಗ್ಗರನಟ್ಟಿ, ಪಿ. ಎಲ್‌. ಕಾತರಕಿ,ಪಿ ಎಸ್ ದೂಡಮನಿ, ಎಸ್‌. ಎಸ್‌. ಸವದತ್ತಿ, ಎಸ್‌. ಎಸ್‌. ಜಕಾತಿ, ಎನ್‌. ಎಸ್‌. ಮಿಲ್ಲಾನಟ್ಟಿ ಉಪಸ್ಥಿತರಿದ್ದರು ಉಪಸ್ಥಿತರಿದ್ದರು 


ಸುದ್ದಿ ಓದಿ