ಇಂಡಿ

ಟಾಟಾ ಸಮೂಹದೊಂದಿಗೆ ತಾಂತ್ರಿಕ ಕೇಂದ್ರ ಲೋಕಾರ್ಪಣೆ

ಟಾಟಾ ಸಮೂಹದೊಂದಿಗೆ ತಾಂತ್ರಿಕ ಕೇಂದ್ರ ಲೋಕಾರ್ಪಣೆ

ಇಂಡಿ20:  ಐಟಿಐಗಳಲ್ಲಿ ಉತ್ತೀರ್ಣರಾದವರು ಉದ್ಯಮದಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಹೊಂದಲು, ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಐಟಿಐಗಳನ್ನು ತಂತ್ರಜ್ಞಾನ ಕೇಂದ್ರಗಳನ್ನಾಗಿ ಉನ್ನತೀಕರಿಸಿರುವ ಯೋಜನೆಯ ಲಾಭ ಯುವಕರು ಪಡೆದುಕೊಳ್ಳಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. 

ಅವರು ಸೋಮವಾರ ಪಟ್ಟಣದ ವಿಜಯಪುರ ರಸ್ತೆಯ ಐಟಿಐ ಕಾಲೇಜಿನಲ್ಲಿ ಟಾಟಾ ಸಮೂಹದೊಂದಿಗೆ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗಿರುವ ಲೋಕಾರ್ಪಣೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 

ಟಾಟಾ ಟೆಕ್ನಲಜೀಸ್ ಸಂಸ್ಥೆ ಅನೇಕ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ದೇಶದ ಬೆಳವಣೆಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾಜಿಕವಾಗಿ ಯುವಕರನ್ನು ಸಹಾಯಮಾಡುತ್ತಿದ್ದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಜನಸ್ನೇಹಿಯಾಗಿ ಕಾರ್ಯ ಮಾಡಿದ್ದಾರೆ ಎಂದರು. 

ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಯುವಕರು ಹೊಸ ಅವಿಷ್ಕಾರದ ಅವಕಾಶ ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಸರಕಾರ 480 ಕೋಟಿ ರೂ ಹಣದಲ್ಲಿ 150 ಕಾಲೇಜುಗಳಲ್ಲಿ ಐಟಿಐ ಓದುವ ಮಕ್ಕಳಿಗೆ ಟಾಟಾ ಸಮೂಹ ದೊಂದಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಿದ್ದು ಅದರ ಲಾಭ ಪಡೆದುಕೊಳ್ಳಬೇಕೆಂದರು.  

ಪ್ರಾಚಾರ್ಯ ಪಿ.ವಾಯ್‌. ರಜನೀಕರ, ಸಂತೋಷ ಬಂಡೆ, ನಿರ್ಮಿತ ಕೇಂದ್ರದ ಮಹೇಶ ಬಿರಾದಾರ, ಗಂಗಾಧರ ಬಾಗೆಳ್ಳಿ, ರಮೇಶ ಮೇತ್ರಿ ಮಾತನಾಡಿದರು. ವಿದ್ಯಾರ್ಥಿಗಳಾದ ಸದಾನಂದ ತಳವಾರ, ತೌಶಿಫ್ ಚಪ್ಪರಬಂದ ಅನಿಸಿಕೆ ವ್ಯಕ್ತ ಪಡಿಸಿದರು.  

ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ, ಜಾವೇದ ಮೋಮಿನ, ಗುರನಗೌಡ ಪಾಟೀಲ, ಎಂ.ಎ. ಮಠ, ಭಾಗ್ಯಜ್ಯೋತಿ ಮತ್ತಿತರಿದ್ದರು.  

ಸುದ್ದಿ ಓದಿ