ಹೂವಿನ ಹಡಗಲಿ

"ಮಕ್ಕಳಿಗಾಗಿ ಸಂವಿಧಾನ" ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

"ಮಕ್ಕಳಿಗಾಗಿ ಸಂವಿಧಾನ" ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಹೂವಿನ ಹಡಗಲಿ 29 : ಭಾರತದ ಸಂವಿಧಾನ ಜನಸಾಮಾನ್ಯರ ಬದುಕಿಗೆ ದಾರೀದೀಪ ಎಂದು ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್ ಹೇಳಿದರು.ತಾಲೂಕಿನ ಎಂ ಎಂ ಜಿ ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಗುರುವಾರ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಸಿಂಚನ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಭಾರತದ ಸಂವಿಧಾನ 75 ಅಂಗವಾಗಿ ಲೇಖಕಿ ವಾಣಿ ಪೆರಿಯೋಡಿ ರವರ "ಮಕ್ಕಳಿಗಾಗಿ ಸಂವಿಧಾನ" ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನ್ಯಾಯ, ಸ್ವಾತಂತ್ರ್ಯ, ಸಮಾನತೆ ಭ್ರಾತೃತ್ವದಂತಹ ಮೌಲ್ಯಗಳು ಸಂವಿಧಾನದಲ್ಲಿ ಅಡಗವಾಗಿವೆ ಎಂದರು.ದೇಶದ ಮುಂದಿನ ವಾರಸುದಾರರಾಗುವ ಮಕ್ಕಳಿಗೆ ಶಾಲಾ ಹಂತದಲ್ಲೇ ಸಂವಿಧಾನದ ಆಶಯಗಳನ್ನು ಅತ್ಯಂತ ಸರಳವಾಗಿ "ಮಕ್ಕಳಿಗಾಗಿ ಸಂವಿಧಾನ" ಪುಸ್ತಕದಲ್ಲಿ ಲೇಖಕಿ ವಿಶ್ಲೇಷಿಸಿದ್ದಾರೆ. ಮಕ್ಕಳು ಕೃತಿಯನ್ನು ಓದಿ ಸುಭದ್ರ ದೇಶ ಕಟ್ಟಲು ಮುಂದಾಗಿರಿ ಎಂದರು.ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳ ತುಂಬಿದ ಸಂದರ್ಭದಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಹಾಗೂ ಸಿಂಚನ ಪ್ರಕಾಶನ ಶಾಲಾ ಮಕ್ಕಳಿಗೆ ಸಂವಿಧಾನ ಪುಸ್ತಕ ಉಚಿತವಾಗಿ ಹಂಚುತ್ತಿರುವುದು ಶ್ಲಾಘನೀಯ ಎಂದರು.ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರತಿಯೊಬ್ಬರು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅರಿಯಬೇಕು ಎಂದರು.ಪ್ರೌಢಶಾಲೆಯ ಮುಖ್ಯ ಗುರುಗಳಾದ ವಸಂತ್ ಬಡಿಗೇರ್ ಅಧ್ಯಕ್ಷತೆ ವಹಿಸಿದ್ದರು. 

ಶಾಲೆಯ ಶಿಕ್ಷಕರಾದ ಆರ್ ಎಂ ಶೋಭಾ,ಜಿ ಸಂತೋಷ್, ಬಿ ಎಂ ಹಾಲಸ್ವಾಮಿ, ಎಸ್ ಸಣ್ಣಹನುಮಂತಪ್ಪ, ಡಿ ಜಿ ಲೋಕೇಶ್ ನಾಯ್ಕ್‌, ಡಿ ಎಂ ತುಕರಾಮನಾಯ್ಕ್‌ ಇತರರು ಉಪಸ್ಥಿತರಿದ್ದರು.ಹಾಜರಿದ್ದರು.ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಸಂವಿಧಾನ ದಿನಾಚರಣೆ 75 ರ ನಿಮಿತ್ತ ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದಾಗಿ ಹೇಳಿದರು.ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ "ಮಕ್ಕಳಿಗಾಗಿ ಸಂವಿಧಾನ" ಪುಸ್ತಕಗಳನ್ನು ವಿತರಿಸಲಾಯಿತು. 


ಸುದ್ದಿ ಓದಿ