ರಾಣೆಬೆನ್ನೂರ

ಗೊತ್ತು ಗುರಿ ಇಲ್ಲದ ಟೊಳ್ಳು ಬಜೆಟ್: ಲಮಾಣಿ ಆಕ್ರೋಶ

ಗೊತ್ತು ಗುರಿ ಇಲ್ಲದ ಟೊಳ್ಳು ಬಜೆಟ್: ಲಮಾಣಿ ಆಕ್ರೋಶ

ರಾಣೇಬೆನ್ನೂರು 09: ಕರೋನಾ ಸಂಕಷ್ಟದ ಕಾಲದಲ್ಲಿ ಬಜೆಟ್‍ನಲ್ಲಿ ರೈತರಿಗೆ ಅನ್ಯಾಯವೆಸಗಿದ್ದಾರೆ. ಬಡಕೂಲಿಕಾರ್ಮಿಕರಿಗೆ ಹಾಗೂ ನೇಕಾರರಿಗೆ ಅಲ್ಪ ಸಂಖ್ಯಾತರಿಗೆ, ಉತ್ತರ ಕರ್ನಾಟಕಕ್ಕೆ ಅನ್ಯಾಯವೆಸಗಿದ್ದಾರೆ. ಗೃಹ ಸಚಿವರು, ಸಂಸದರ, ವಿಧಾನ ಪರಿಷತ್ತ ಸದಸ್ಯರು ಇದ್ದರೂ ಕೂಡ ಬಜೆಟ್‍ನಲ್ಲಿ ಹಾವೇರಿ ಜಿಲ್ಲೆಗೆ ಶೂನ್ಯ ಬಜೆಟ್ ಇದಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ 2021-22 ನೇ ಸಾಲಿನ ಆಯವ್ಯಯಕ್ಕೆ ಹಾವೇರಿ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘದ  ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಎಸ್ ಲಮಾಣಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.  

ಮಂಗಳವಾರದಂದು ಪತ್ರಿಕೆ ಪ್ರಕಟಣೆ ನೀಡಿದ ಅವರು, ರಾಜ್ಯದ ಜನರಿಗೆ ಈ ಬಜೆಟ್ ನಿಂದ ಭಾರಿ ನಿರಾಸೆಯಾಗಿದೆ. ಈ ಬಜೆಟ್ ನಲ್ಲಿ ಏನೂ ಇಲ್ಲ. ರೈತಾಪಿ ಮತ್ತು ಬಡವರಿಗೆ ಯೋಜನೆ ಕೊಡುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಗೊತ್ತು ಗುರಿ ಇಲ್ಲದ. ಟೊಳ್ಳು ಬಜೆಟ್ ಇದಾಗಿದೆ. ಈ ಬಜೆಟ್ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲ. ಇದು ಅನೈತಿಕ ಸರ್ಕಾರ. ಈ ಸರ್ಕಾರಕ್ಕೆ ಬಜೆಟ್ ಮಂಡಿಸುವ ನೈತಿಕತೆ ಇಲ್ಲ. 

ಆಪರೇಷನ್ ಕಮಲ ಎಂಬ ಅನೈತಿಕ ರಾಜಕೀಯದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ ಆಪರೇಷನ್ ಬರ್ಬಾದ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದಕ್ಕೆ ಕಳೆದ ಮತ್ತು ಈ ವರ್ಷದ ಎರಡು ಬಜೆಟ್‍ಗಳೇ ಸಾಕ್ಷಿಯಾಗಿದೆ.  ಸಂಕಷ್ಟಗಳ ಸರಮಾಲೆಗೆ ಸಿಲುಕಿರುವ ರೈತರು ದೇಶದಾಧ್ಯಂತ ಬೀದಿಗಳಿದಿದ್ದಾರೆ. ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರನ್ನು ದಿವಾಳಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಜೊತೆ ಸೇರಿರುವ ರಾಜ್ಯ ಸರ್ಕಾರ ಬಜೆಟ್‍ನಲ್ಲೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ. 

ಇತ್ತೀಚಿಗೆ ಸಚಿವ ರಮೇಶ್ ಜಾರಕಿಹೊಳೆ ಅವರ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ಬಯಲಾಗಿರುವ ಹಿನ್ನಲೆಯಲ್ಲಿ ನೈತಿಕತೆ ಇಲ್ಲದ ಬಿಜೆಪಿ ಪಕ್ಷದಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಬಜೆಟ್ ಕಾಣುವುದು ವಿರಳ. ಕೆಲವರು ಡಿ ನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿದ್ದಾರೆ. ಸಚಿವ ನಿರಾಣಿ ಕೂಡ ಜಾಮೀನು ಮೇಲಿದ್ದಾರೆ. ಅಷ್ಟೇ ಅಲ್ಲದೆ 6 ಜನ ಸಚಿವರು ತಮ್ಮ ಕರ್ಮಕಾಂಡ ಬಯಲಾಗುವ ಭೀತಿಯಿಂದ ಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ ಈ ಅನೈತಿಕ ಸರ್ಕಾರಕ್ಕೆ ಬಜೆಟ್ ಮಂಡಿಸುವ ನೈತಿಕತೆಯೇ ಇಲ್ಲ. ಇದು ರೈತ ವಿರೋಧಿ ಬಜೆಟ್ ಆಗಿದ್ದು . ಇದು ಬಹುತೇಕ ಶ್ರೀಮಂತರ, ಉದ್ದಿಮೆಧಾರರ ಬಜೆಟ್ ಆಗಿದೆ. ಒಟ್ಟು ರಾಜ್ಯದಲ್ಲಿ 31 ಜಿಲ್ಲೆ, 175 ತಾಲೂಕು ಸೇರಿದಂತೆ 745 ಹೋಬಳಿ ಹೊಂದಿದ್ದು, ಈವೇಲ್ಲ ಅಂಶಗಳನ್ನು ಮನಗಂಡು, ಮುಂದಿನ ದಿನಗಳಲ್ಲಿ ಬಜೆಟ್ ಮಂಡನೆ ಸಂದರ್ಭದಲ್ಲಿ 224 ಶಾಸಕರನ್ನು ಕರೆಯಿಸಿ ಅವರ ಅಭಿಪ್ರಾಯವನ್ನು ಗಮನದಲ್ಲಿಟ್ಟು, ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡಬೇಕು.  ಎಂದು ಕೃಷ್ಣಮೂರ್ತಿ ಲಮಾಣಿ ಅವರು ಸಲಹೆ ನೀಡಿದ್ದಾರೆ.  

ಸುದ್ದಿ ಓದಿ