ಯರಗಟ್ಟಿ

ಲಕ್ಷ್ಮೀ ಅರ್ಬನ ಸೌಹಾರ್ದ ಸಹಕಾರಿ ಪ್ರತಿಭಾ ವಿದ್ಯಾರ್ಥಿಗೆ ಸನ್ಮಾನ

ಲಕ್ಷ್ಮೀ ಅರ್ಬನ ಸೌಹಾರ್ದ ಸಹಕಾರಿ ಪ್ರತಿಭಾ  ವಿದ್ಯಾರ್ಥಿಗೆ ಸನ್ಮಾನ

ಲೋಕದರ್ಶನ ವರದಿ

ಯಮಕನಮರಡಿ 14: ಸ್ಥಳೀಯ ಶ್ರೀ ಲಕ್ಷ್ಮೀ ಅರ್ಬನ ಸೌಹಾರ್ದ ಸಹಕಾರಿ ಸಂಘವು ಇತ್ತಿಚಿನ ದಿನಗಳಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಬಡ ವಿದ್ಯಾರ್ಥಿಗಳು ಪ್ರತಿಭಾನ್ವಿತ ವಿದ್ಯಾಥರ್ಿಗಳಿದ್ದರು. ಸಹಿತ ಇವರಿಗೆ ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಅನಕೂಲಕ್ಕೆ ಇಲ್ಲದೆ ಇರುವುದರಿಂದ ಶಾಲೆ ಕಾಲೇಜುಗಳಿಗೆ ಹೋಗಲು ಅನುಕೂಲವಾಗದೆ ಇರುವ ವಿದ್ಯಾಥರ್ಿಗಳನ್ನು ಇಂತ ಸಂಸ್ಥೆಗಳಿಂದ ಗುರುತಿಸಿ ಅವರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿದಲ್ಲಿ ಅವರು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ರವೀಂದ್ರ ಜಿಂಡ್ರಾಳಿ ಹೇಳಿದರು. ಅವರು ಇತ್ತಿಚಿನ ತಮ್ಮ ಸಂಸ್ಥೆಯ 27ನೇ ವಾರ್ಷಿಕ ಸಭೆಯಲ್ಲಿ ಗ್ರಾಮದ ವಿದ್ಯಾರ್ಥಿನಿ ಸೂಜಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡುತ್ತಾ ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಿ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವದಾಗಿ ಹೇಳಿದರು. 

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸಂಸ್ಥೆಯ ಆಡಳಿತ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ