ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್

ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ Lakshmi Hebbalkar met Siddaramaiah and thanked him.

ಲೋಕದರ್ಶನ ವರದಿ 

ಬೆಂಗಳೂರು 04: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಂಗಳೂರಿನಲ್ಲಿ ಗುರುವಾರ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರ ಸಚಿವ ಸಂಪುಟದಲ್ಲಿ 3 ವರ್ಷಗಳ ಕಾಲ ಸಚಿವೆಯಾಗಿ ರಾಜ್ಯದ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಶೋಷಿತರ, ಹಿಂದುಳಿದವರ ಹಾಗೂ ಬಡವರ ಧ್ವನಿಯಾಗಿ ನಿಂತು, ಜನಪರ ಆಡಳಿತ ನೀಡಿದ ಹೆಗ್ಗಳಿಕೆ ತಮ್ಮದು. ನಿಮ್ಮ ದೂರದೃಷ್ಟಿಯ ಯೋಜನೆಗಳು, ಸಾಮಾಜಿಕ ನ್ಯಾಯದ ಬದ್ಧತೆ ಮತ್ತು ಆಡಳಿತ ವೈಖರಿ ನಮಗೆಲ್ಲರಿಗೂ ಸದಾ ದಾರೀದೀಪ. ನಿಮ್ಮ ಮಾರ್ಗದರ್ಶನದಲ್ಲಿ ಜನಸೇವೆ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಸಿದ್ದರಾಮಯ್ಯ ಅವರಿಗೆ ತಿಳಿಸಿದರು. ನಿಮ್ಮ ಅನುಭವದ ನಾಯಕತ್ವ ಹಾಗೂ ಆಶೀರ್ವಾದ ಎಂದಿನಂತೆ ನಮ್ಮ ಮೇಲಿರಲಿ ಎಂದು ವಿನಂತಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.