ಅಥಣಿ

ಲಕ್ಷ್ಮಣ ಸವದಿಯವರು ರೇಶನ್ ಕಿಟಗಳನ್ನು ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ

ಲಕ್ಷ್ಮಣ ಸವದಿಯವರು ರೇಶನ್ ಕಿಟಗಳನ್ನು ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ

ವೆಂಕಟೇಶ ದೇಶಪಾಂಡೆ ಅಥಣಿ

ಅಥಣಿ 12 : ಕರೋನಾ ಮಹಾ ಮಾರಿ ನಿಯಂತ್ರಣಕ್ಕಾಗಿ ಕಳೆದ 40 ದಿನಗಳಿಂದ ರಾಜ್ಯದಲ್ಲಿ ಜನತಾ ಕಫರ್ೂ ಹಾಗೂ ಲಾಕ್ ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ಅಥಣಿ ಮತಕ್ಷೇತ್ರದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದೆನ್ನುವ ಉದ್ದೇಶದಿಂದ ಕಳೆದ 15 ದಿನಗಳಿಂದ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿಯವರು ರೇಶನ್ ಕಿಟಗಳನ್ನು ವಿತರಿಸುತ್ತಿರುವ ಕಾರ್ಯ ಅಭಿನಂದನಾರ್ಹ ಎಂದು ನ್ಯಾಯವಾದಿ ಸಿದ್ಧಾರೂಢ ಸವದಿ ಹೇಳಿದರು. ಅವರು ಅಥಣಿ ಮತಕ್ಷೇತ್ರದ ಕರ್ಲಟ್ಟಿ, ರಾಮವಾಡಿ, ಹುಲಬಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೇಶನ್ ಕಿಟ್ಟಗಳನ್ನು ಹಂಚಿ ಮಾತನಾಡುತ್ತಿದ್ದರು. 

ಲಾಕ್ ಡೌನ್ದಿಂದಾಗಿ ಕೂಲಿ ಕಾಮರ್ಿಕರು, ವಯೋ ವೃದ್ಧರು ಸೇರಿದಂತೆ ಆಥರ್ಿಕವಾಗಿ ಹಿಂದುಳಿದ ಕುಟುಂಬಗಳು ತೀವೃ ಸಂಕಷ್ಟದಲ್ಲಿದ್ದವು ಇದನ್ನು ಅರಿತ ಲಕ್ಷ್ಮಣ ಸವದಿಯವರು ಸಾವಿರಾರು ಕುಟುಂಬಗಳಿಗೆ ಅತ್ಯಂತ ಶಿಸ್ತಿನಿಂದಲೇ ಪ್ರತಿ ಗ್ರಾಮ, ಗಲ್ಲಿ, ಮೊಹಾಲ್ಲಾಗಳಿಗೆ ಹೋಗಿ ರೇಶನ್ ಕಿಟ್ಟಗಳನ್ನು ಹಂಚಲಾಗುತ್ತಿದೆ ಎಂದ ಅವರು ಮೇ ತಿಂಗಳ ಮಧ್ಯದಲ್ಲಿ ಕೋವಿಡ್ ತಾಂಡವಾಡುತ್ತಿದ್ದ ಸಮಯದಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿಯೇ ಲಕ್ಷ್ಮಣ ಸವದಿಯವರು ಆಕ್ಸಿಜನ್ ಲಭ್ಯ ಇರುವ ಕೋವಿಡ್ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಮಾದರಿ ರಾಜಕಾರಣಿ ಕೂಡ ಆಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಧುರೀಣ ಶ್ರೀಶೈಲ ಹಳ್ಳದಮಳ ಸೇರಿದಂತೆ ಬಿಜೆಪಿ ಧುರೀಣರು, ಕಾರ್ಯಕರ್ತರು, ಚುನಾಯಿತ ಸದಸ್ಯರು, ಫಲಾನುಭವಿಗಳು ಉಪಸ್ಥಿತರಿದ್ದರು. ನ್ಯಾಯವಾದಿ ಸಿದ್ಧಾರೂಢ ಸವದಿ ಆಥರ್ಿಕವಾಗಿ ಹಿಂದುಳಿದ ಕುಟುಂಬಗಳಿಗೆ ರೇಶನ್ ಕಿಟ್ಟ ಹಂಚಿಕೆ ಮಾಡಿದರು. ಶ್ರೀಶೈಲ ಹಳ್ಳದಮಳ ಉಪಸ್ಥಿತರಿದ್ದರು. 



    

 

ಸುದ್ದಿ ಓದಿ