ಯರಗಣವಿಯಲ್ಲಿ ಲಕ್ಕಮ್ಮದೇವಿಯ ಜಾತ್ರೆ ಸಂಭ್ರಮ
ಜಾತ್ರ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡ ಬಸವರಾಜ ಪಟ್ಟಣಶೆಟ್ಟಿ
ಯರಗಟ್ಟಿ: ಸಮೀಪದ ಸುಕ್ಷೇತ್ರ ಯರಗಣವಿ ಲಕ್ಕಮ್ಮದೇವಿಯ ಜಾತ್ರೆ ನಿಮಿತ್ತ ಗ್ರಾಮದಲ್ಲಿ ಎಲೆಲ್ಲು ಸಂಭ್ರಮದ ವಾತಾವರಣ, ಗ್ರಾಮದ ಬೀದಿ ಬೀದಿಗಳಲ್ಲಿ ಹಸಿರು ತೊರಣಗಳಿಂದ, ಬಣ್ಣ ಬಣ್ಣದ ರಂಗೋಲಿ ಚಿತ್ರಗಳನ್ನು ಬಿಡಿಸಿ ಗ್ರಾಮದ ತುಂಬೆಲ್ಲ ಅಲಂಕಾರಗೊಳಿಸಿದ್ದಾರೆ.
ಬೆಳಿಗ್ಗೆ ಲಕ್ಕಮ್ಮದೇವಿಯ ಗದ್ದುಗೆಗೆ ಅಭಿಷೇಕ ಮಾಡಲಾಯಿತು. ನಂತರ ಆರತಿ, ಕುಂಭ, ಭಜನೆ, ಡೋಳ್ಳು, ಜ್ಯಾಂಜ್, ಮುಂತಾದ ವಾದ್ಯಮೇಳ ಗಜರಾಜನೊಂದಿಗೆ ಹಾಗೂ ಕೊಣ್ಣೂರಿನ ಹೆಣ್ಣುಮಕ್ಕಳ ತಂಡದಿಂದ ಡೊಳ್ಳಿನ ಕುಣಿತದೊಂದಿಗೆ ಭವ್ಯ ಪಲ್ಲಕ್ಕಿ ಉತ್ಸವ ಜರುಗಿತು.
ಗ್ರಾಮದ ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತರು ತಮ್ಮ ಸೇವೆ ಸಲ್ಲಿಸಿ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ತಮ್ಮ ಕಷ್ಟಗಳನ್ನು ಪರಿಹರಿಸಲೆಂದು ದೇವರ ಸ್ಮರಣೆ ಮಾಡಿ ಓಂ ನಮಃ ಶಿವಾಯವಾಯ ಎಂದು ಜೈಕಾರ ಹಾಕುತ್ತಾ ಮೇರವಣಿಗೆ ಸಂಭ್ರಮದಿಂದ ಜರುಗಿತು. ನಂತರ ಮಹಾಪ್ರಸಾದ ಕಾರ್ಯಕ್ರಮ ನೆರೆವೆರಿತು.
ನಂತರ ವಿವಿಧ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಿಜೆಪಿ ಯುವ ಮುಖಂಡ ಬಸವರಾಜ ಪಟ್ಟಣಶೆಟ್ಟಿ ಮಾತನಾಡಿದರು ಜಾತ್ರೆ, ಹಬ್ಬ ಹರಿದಿನಗಳು ನಮ್ಮ ಭಾರತೀಯ ಪರಂಪರೆ ಇದರಿಂದ ಮನಸಿಗೆ ಶಾಂತಿ ನಮ್ಮದಿ ಎಂದು ಹೇಳಿದರು.
ಈರಪ್ಪ ಹೊಸಮನಿ, ಬಾಳಪ್ಪ ಗೌಡರ, ಲಕ್ಷ್ಮಣ, ಪೂಜೇರ, ಅಡಿವೆಪ್ಪ ಪಾಟೀಲ, ಯಲ್ಲಪ್ಪ ಪೂಜೇರ, ರಾಮಚಂದ್ರಗೌಡ ಪಾಟೀಲ, ಪರಮಾನಂದ ಹಲಗಲಿ, ಹನಮಂತ ಇಟ್ನಾಳ, ಶಿವಾನಂದ ನಾಯ್ಕಪ್ಪಗೋಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.