ಕೆರೆ ಕಟ್ಟೆಗಳು ರೈತರ ಜೀವನಾಡಿ ಶಾಸಕ ಬಸವರಾಜ ಶಿವಣ್ಣನವರ
ಲೋಕದರ್ಶನ ವರದಿ
ಬ್ಯಾಡಗಿ 18: ಗ್ರಾಮಗಳಲ್ಲಿ ಕೆರೆ ಕಟ್ಟೆಗಳು ರೈತರ ಜೀವನಾಡಿಗಳಾಗಿದ್ದು ರೈತರಿಗೆ ಹೋಲಗಳಿಗೆ ಸಕಾಲಕ್ಕೆ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ದನಕರಗಳ ನೀರು ಕುಡಿಯಲು ಕೆರೆಗಳು ಅಭಿವೃದ್ಧಿ ಹೊಂದಿದರೆ ರೈತರು ಅಭಿವೃದ್ಧಿ ಹೊಂದಿದಂತಾಗುತ್ತದೆ ಎಂದು ಶಾಸಕ ಬಸವರಾಜ್ ಶಿವಣ್ಣನವರು ಅಭಿಪ್ರಾಯ ಪಟ್ಟರು. ತಾಲೂಕಿನ ಬುಡುಪನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಅನುದಾನದಲ್ಲಿ ಸುಮಾರು 83 ಲಕ್ಷ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿರುವರು.
ಈ ಭಾಗದ ಅಂತರ್ಜಲ ಮಟ್ಟ ವೃದ್ಧಿಗೆ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಇದರಿಂದ ಮಳೆ ನೀರು ಕೆರೆಗಳಲ್ಲಿ ಸಂಗ್ರಹಿಸುವ ಮೂಲಕ ಅಂತರ್ಜಲ ಪ್ರಮಾಣ ವೃದ್ಧಿಸಲಿದೆ ಮತ್ತು ಕೆರೆ ನೀರು ಸಂರಕ್ಷಣೆ ಮಾಡುವುದು ಮತ್ತು ಪ್ರತಿಯೊಬ್ಬರು ಮುಂದಿನ ಪೀಳಿಗೆಗಾಗಿ ನೀರನ್ನು ಸಂರಕ್ಷಣೆ ಮಾಡುವುದು ಕಲಿಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ದಾನಪ್ಪ ಚೂರಿ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ನಾಗರಾಜ ಆನ್ವೇರಿ. ಡಾಕ್ಟರ್ ಪುಟ್ಟಯ್ಯ ಬಿಕ್ಷಾವರ್ತಿ ಮಠ. ಹನುಮಂತಪ್ಪ ಹಾದಿಮನಿ. ಹುಚ್ಚಪ್ಪ ಪೂಜಾರ್. ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರೇವಣಪ್ಪ ಟಿ ಆರ್. ಗುತ್ತಿಗೆದಾರದ ಕರಿಯಪ್ಪ ನಡುವಿನ ಮನಿ. ಅಭಿವೃದ್ಧಿ ಅಧಿಕಾರಿ ಪ್ರವೀಣ್ ಸೇರಿದಂತೆ ಗ್ರಾಮದ ಅನೇಕ ಹಿರಿಯರು ಉಪಸ್ಥಿತರಿದ್ದರು.