ಸಿಂಧಗಿ

ಉದ್ಯಾನವನಕ್ಕೆ ಪುರಸಭೆ ಉಪಾಧ್ಯಕ್ಷ ಹಾಸೀಂಪೀರ್ ಭೂಮಿಪೂಜೆ

ಉದ್ಯಾನವನಕ್ಕೆ ಪುರಸಭೆ ಉಪಾಧ್ಯಕ್ಷ ಹಾಸೀಂಪೀರ್ ಭೂಮಿಪೂಜೆ
ಸಿಂದಗಿ : ಪಟ್ಟಣದ ಶಿವಶಕ್ತಿನಗರದಲ್ಲಿರುವ ಶಿವನದೇವಸ್ಥಾನ ಆವರಣದ ಉದ್ಯಾನವನಕ್ಕೆ ಪುರಸಭೆ ಉಪಾಧ್ಯಕ್ಷ ಹಾಸೀಂಪೀರ್ ಆಳಂದ

ಸಿಂದಗಿ 06: ಪಟ್ಟಣದಲ್ಲಿ ಜನಸಂಖ್ಯೆ ಬೆಳೆಯುತ್ತಿರುವ ಜತೆಗೆ ಜನತೆಯ ಅಪೇಕ್ಷೆಯಂತೆ ಪಟ್ಟಣದ ಅಲ್ಲಲ್ಲಿ ಉದ್ಯಾನವನವನ್ನು ನಿರ್ಮಿಸಿಕೊಡುವ ಉದ್ದೇಶ ಪುರಸಭೆಗೆ ಇದೆ ಎಂದು ಪುರಸಭೆ ಉಪಾಧ್ಯಕ್ಷ ಹಾಸೀಂಪೀರ್ ಆಳಂದ ಹೇಳಿದರು. 

ಪಟ್ಟಣದ ಶಿವಶಕ್ತಿನಗರದಲ್ಲಿರುವ ಶಿವನದೇವಸ್ಥಾನ ಆವರಣದ ಉದ್ಯಾನವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 

ಹಿಂದಿನಿಂದಲೂ ನಗರದ ಜನರು ಮಕ್ಕಳಿಗಾಗಿ ಉದ್ಯಾನವನ ಬೇಕೆಂದು ಬೇಡಿಕೆ ಸಲ್ಲಿಸುತ್ತಿದ್ದರು. ಅದರಂತೆ ಈ  ಸಂದರ್ಭದಲ್ಲಿ ನಿರ್ಮಾಣಗೊಳಿಸಲಾಗುತ್ತಿದೆ ಎಂದರು. 

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ನಗರವನ್ನು ಮಾದರಿ ಪ್ರದೇಶವನ್ನಾಗಿಸಲಾಗುವುದು  ಕುಡಿಯುವ ನೀರು, ಕಾಂಕ್ರೀಟ್ ರಸ್ತೆ, ಗಟಾರು, ಬೀದಿದೀಪ, ಉದ್ಯಾನವನ, ಹೀಗೆ ಹಲವಾರು ಸೌಲಭ್ಯಗಳನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ ಇದರಿಂದ ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಲಿದೆ ಎಂದರು.  

ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ್, ಬಸವರಾಜ ಯರನಾಳ, ಚಂದ್ರಶೇಖರ ನಾಗರಬೆಟ್ಟ, ಕರ್ನಾಟಕ ಜನಸ್ಪಂದನ್ ಟ್ರಸ್ಟ್ ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ್, ಶಿವಶಕ್ತಿ ಸೇವಾ ಸಂಘದ ಅಧ್ಯಕ್ಷ ರಾಹುಲ ಗುತ್ತೇದಾರ, ಶಿವಶಕ್ತಿ ಸೇವಾ ಸಂಘದ ಕಾರ್ಯದರ್ಶಿ ರೇವಣಸಿದ್ದಪ್ಪ ಹಡಪದ, ಆರ್.ಎಲ್.ಕನ್ನೋಳ್ಳಿ, ಎನ್.ಎಂ.ಶೆಳ್ಳಗಿ, ರಾಜು ರೊಟ್ಟಿ, ಮಲ್ಲಯ್ಯ ಗಂಗನಳ್ಳಿ, ಕಲ್ಲಪ್ಪ ನಂದರಗಿ, ಬಾಬು ಚಾಂದಕವಠೆ, ಸಂತೋಷ ಮನಗೂಳಿ, ಶರಣಪ್ಪ ಮೇತ್ರಿ, ದಯಾನಂದ ಜಾಡರ್, ಭಾಗಣ್ಣ ತಮದೊಡ್ಡಿ, ರವಿ ಮಣೂರ, ಬಂಡಯ್ಯ ಗಂಗನಳ್ಳಿ, ಬಸವರಾಜ ಗುತ್ತೇದಾರ, ರಫೀಕ್ ಮುಲ್ಲಾ, ಅನೀಲ ನಾಯಕ, ಸಂಗಣ್ಣ ಅಗಸರ, ಬಾಪುಸಾಬ ಮುಲ್ಲಾ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ