ಬಿಜೆಪಿಯಲ್ಲಿ ಎರಡನೇಯ ತಲೆಮಾರಿನ ಯುವ ಮುಖಂಡರ ಕೊರತೆ
ಶಿಗ್ಗಾವಿ 27: ತಾಲೂಕಿನ ಬಿಜೆಪಿ ಪಕ್ಷದ ಸಂಘಟನೆ ಮತ್ತು ಅಸ್ತಿತ್ವ ಹೇಗಿದೆ ಎಂಬುದನ್ನು ನಮ್ಮ ಪಕ್ಷದ ಕಾರ್ಯಾಧ್ಯಕ್ಷ ವಿರೇಶ ಆಜೂರ ಅವರು ಬಿಜೆಪಿ ಸೇರೆ್ಡ ಆಗಿದ್ದನ್ನು ನೋಡಿದರೆ ಬಿಜೆಪಿಯಲ್ಲಿ ಎರಡನೇಯ ತಲೆಮಾರಿನ ಯುವ ಮುಖಂಡರ ಕೊರತೆವಿರಬಹುದು ಎಂದು ತಾಲೂಕ ಕಾಂಗ್ರೇಸ ವಕ್ತಾರ ಮಂಜುನಾಥ ಮಣ್ಣಣ್ಣವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷಕ್ಕೆ ಹೊಸ ಮುಖಗಳ ಆಹ್ವಾನ ನೋಡಿದರೇ ಅಲ್ಲಿಯ ಎರಡನೇಯ ತಲೆಮಾರಿನ ಮುಖಂಡರು ಎಚ್ಚೆತ್ತುಕೊಳ್ಳಬೇಕು ಹಾಗೂ ಭಾಜಪದಲ್ಲಿ ಪಕ್ಷ ಸಂಘಟನೆ ಮತ್ತು ನಾಯಕತ್ವ ಅಭಾವ ಇರುವುದಾಗಿ ಕಂಡು ಬರುತ್ತದೆ. ಸಚಿವ ಬೊಮ್ಮಾಯಿಯವರು ರಾಜಕೀಯ ನಮ್ಮ ಕ್ಷೇತ್ರಕ್ಕೆ ಹೊಸದೇನಲ್ಲ ಅಧಿಕಾರ ಮತ್ತು ಹಲವು ಆಮಿಷಗಳನ್ನು ತೋರಿಸಿ ಅನ್ಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ವ್ಯಾಪಾರೀಕರಣ ಮಾಡುವುದು ತಾಲೂಕಿನ ಮತದಾರರಿಗೆ ಗೊತ್ತಿದ್ದ ವಿಷಯ.
ಕಳೆದ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಇದೇ ವಿರೇಶ ಆಜೂರ ಸಚಿವರ ಮನೆ ಬಾಗಿಲಗೆ ಟಿಕೇಟ ಆಕಾಂಕ್ಷಿಯಾಗಿ ಅಲೆದಾಡಿ ಬೇಸತ್ತು ಪಕ್ಷವನ್ನು ತೊರೆದು ಕಾಂಗ್ರೇಸ ಪಕ್ಷದಿಂದ ಟಿಕೇಟ ಪಡೆದು ಕುಂದೂರು ಜಿಲ್ಲಾ ಪಂಚಾಯತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನ್ನು ನೋಡಿದ್ದಾರೆ ಹಾಗೂ ಇದೇ ಸಚಿವರು ಟಿಕೇಟ ಯಾರಿಗೆ ಕೊಟ್ಟು ಯಾವ ರೀತಿ ಗೆಲ್ಲಿಸಿಕೊಂಡು ಬಂದಿರುವುದನ್ನು ಜನ ಹಾಗೂ ಮತದಾರರು ಅವಲೋಕಿಸಿದ್ದಾರೆ, ಆದರೂ ಸಹಿತ ವಿರೇಶ ಆಜೂರ ಒಬ್ಬ ನಿಷ್ಠಾವಂತ ಕಾರ್ಯಕರ್ತ ಹಾಗೂ ಮುಖಂಡ ಮತ್ತು ಸಂಘಟನಾ ಚತುರ ಅವರಿಗೆ ಸಚಿವರು ಏನಾದರೂ ಭರವಸೆ ಕೊಟ್ಟಲ್ಲಿ ಈಡೇರಿಸುವ ಕೆಲಸವಾಗಲಿ ಹಾಗೂ ಬರುವ ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ಪಕ್ಷದ ಪರ ಹಾಗೂ ಜನಸಾಮಾನ್ಯರಲ್ಲಿ ಬೆರೆಯುವ ಕಾರ್ಯಕರ್ತರು ಮತ್ತು ಮುಖಂಡರಿಗೆ ಅವಕಾಶ ಮಾಡಿಕೊಡಬೇಕು ಹಾಗೂ ಹಗಲು ಕಾಂಗ್ರೇಸ್ ರಾತ್ರಿ ಬಿಜೆಪಿ ಎನ್ನುವ ಕಾರ್ಯಕರ್ತರು ಮತ್ತು ಮುಖಂಡರ ಬಗ್ಗೆ ಗಮನಹರಿಸಬೇಕು ಎಂದರು.