ಸ್ಥಳೀಯ ಕೆನರಾ ಬ್ಯಾಂಕಿನಲ್ಲಿ ಪಾಸ್ ಬುಕ್ ಕೊರತೆ
ಲೋಕದರ್ಶನ ವರದಿ
ಘಟಪ್ರಭಾ 02: ಸ್ಥಳೀಯ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆಯ ಪಾಸ್ ಬುಕ್ ಕೊರತೆ ಎದ್ದು ಕಾಣುತ್ತಿದ್ದು, ಕಳೆದ ಹಲವಾರು ತಿಂಗಳಿಂದ ಗ್ರಾಹಕರು ಉಳಿತಾಯ ಖಾತೆ ಮಾಡಿಸಿ ಪಾಸ್ ಬುಕ್ಗಳಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಪಾಸ್ ಬುಕ್ಗಳಿಗಾಗಿ ಅಲೆದಾಡುತ್ತಿರುವ ಗ್ರಾಹಕರ ಸಮಸ್ಯೆ ಒಂದಾದರೆ ಹಣ ತೆಗೆದುಕೊಳ್ಳುವ ಮತ್ತು ಜಮಾ ಮಾಡುವ ಸಲುವಾಗಿ ಒಂದೇ ಕೌಂಟರ ಮಾಡಿದ್ದು, ಹಣ ಪಡೆಯುವವರು ಹಾಗೂ ಜಮಾ ಮಾಡುವವರು ಸಾಲಿನಲ್ಲಿ ಗಂಟೆಗಟ್ಟಲೇ ಕಾಯಬೇಕಾಗುತ್ತದೆ. ಕಾರಣ ಹಣ ಜಮಾ ಮಾಡುವವರ ಹಾಗೂ ಹಣ ತೆಗೆದುಕೊಳ್ಳುವವರ ಪ್ರತ್ಯೇಕ ಕೌಂಟರ ಮಾಡುವ ಅವಶ್ಯಕತೆ ಇದೆ.
ಸಿಂಡಿಕೇಟ ಬ್ಯಾಂಕವು ಕೆಲವು ತಿಂಗಳ ಹಿಂದೆ ಕೆನರಾ ಬ್ಯಾಂಕದಲ್ಲಿ ವಿಲಿನಗೊಂಡಿದೆ. ಆದರೆ ಸಿಂಡಿಕೇಟ ಬ್ಯಾಂಕ ಇದ್ದಾಗಲಿಂದಲೂ ಬ್ಯಾಂಕ ಪಾಸ್ ಬುಕ್ಗಳ ಕೊರತೆ ಇದ್ದು, ಈಗ ಕೆನರಾ ಬ್ಯಾಂಕದಲ್ಲಿ ವಿಲಿನಗೊಂಡರೂ ಸಹ ಪಾಸ್ಬುಕ್ ಕೊರತೆ ನಿವಾರಣೆಯಾಗಿಲ್ಲ. ಕರ್ನಾಟಕ ಸರ್ಕಾರದ ಗ್ಯಾರಂಟಿಗಳಿಂದ ಅನೇಕ ಜನರು ಹೊಸ ಖಾತೆ ತೆರೆಯಲು, ಆದಾರ ಕಾರ್ಡ, ಪೋನ ನಂಬರ ಲಿಂಕ ಮಾಡಲು ಪರದಾಡುತ್ತಿದ್ದು, ಪಾಸ್ ಬುಕ್ ಕೊರತೆಯಿಂದ ಮತ್ತಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿಯೇ ದೊಡ್ಡ ಬ್ಯಾಂಕ ಎಂದು ಹೆಸರುವಾಸಿಯಾಗಿರುವ ಕೆನರಾ ಬ್ಯಾಂಕಿನ ಗ್ರಾಹಕರ ತೊಂದರೆ ಕೇಳುವವರೆ ಇಲ್ಲವೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಆದ್ದರಿಂದ ಕೂಡಲೇ ಸಂಭಂದಿಸಿದ ಕೆನರಾ ಬ್ಯಾಂಕಿನ ಮೇಲಾಧಿಕಾರಿಗಳು ಸಾರ್ವಜನಿಕರ ತೊಂದರೆ ಬಗೆಹರಿಸುವತ್ತ ಗಮನ ಹರಿಸಬೇಕೆಂಬುದು ಗ್ರಾಹಕರ ಆಗ್ರಹವಾಗಿದೆ.