ಕಾರ್ಮಿಕ ಅದಾಲತ್ ಕಾರ್ಯಕ್ರಮ
ಶಿಗ್ಗಾವಿ 08: ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ಶಿಗ್ಗಾವಿ, ಕಾರ್ಮಿಕ ಇಲಾಖೆ ಶಿಗ್ಗಾವಿ, ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಬಾಕಿ ಅರ್ಜಿಗಳ ವಿಲೇವಾರಿ ಮಾಡುವ ಅಂಗವಾಗಿ ಕಾರ್ಮಿಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಬಾಕಿ ಇರುವ ಶೈಕ್ಷಣಿಕ, ಮದುವೆ, ಮರಣ, ಹೆರಿಗೆ ಹಾಗೂ ಸರ್ಕಾರದ ಸಹಾಯ ಧನದ ಅರ್ಜಿಗಳನ್ನು ವಿಲೇವಾರಿ ಮಾಡಲು ಕಾರ್ಮಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮವನ್ನು ಕಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕ ಕಾನೂನು ಸೇವೆಗೆಳ ಸಮೀತಿ ಶಿಗ್ಗಾವಿಯ ಶ್ರೀದೇವಿ ದರ್ಬಾರೆ ಅವರು ಉಧ್ಘಾಟಿಸಿದರು.
ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಸುರಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರ್ಕಾಣಿ, ಕಾರ್ಮಿಕ ನೀರಿಕ್ಷಕರಾದ ಲತಾ ಟಿ ಎಸ್ ಸಿಬ್ಬಂದಿಗಳಾದ ಮಂಜುನಾಥ ಬಡಿಗೇರ, ದಯಾನಂದ ಅಣ್ಣಿಗೇರಿ, ಬಸವರಾಜ ಇದ್ದರು.