ಯರಗಟ್ಟಿ

ಮಾಡಮಗೇರಿಯಲ್ಲಿ ಎನ್‌ಎಸ್‌ಎಸ್ ಶಿಬಿರ: ಕುರುಬಗಟ್ಟಿಮಠ ಚಾಲನೆ

ಮಾಡಮಗೇರಿಯಲ್ಲಿ ಎನ್‌ಎಸ್‌ಎಸ್ ಶಿಬಿರ: ಕುರುಬಗಟ್ಟಿಮಠ ಚಾಲನೆ

ಯರಗಟ್ಟಿ 07: ಸಮೀಪದ ಮಾಡಮಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಶಿಬಿರದ ಕಾರ್ಯಕ್ರಮಕ್ಕೆ ಶಿವಯೋಗಿ ಕುರುಬಗಟ್ಟಿಮಠ ಇತ್ತೀಚೆಗೆ ಚಾಲನೆ ನೀಡಿದರು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯುವಕರು ದೇಶದ ಬೆನ್ನೆಲುಬು, ತ್ಯಾಗ, ಸೇವೆ, ಸಹಕಾರ ಮತ್ತು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ದೇಶ ಕಟ್ಟುವಂತವರಾಗಬೇಕು ಎಂದರು. 

ಪ್ರಾಸ್ತಾವಿಕವಾಗಿ ಕಾಲೇಜು ಪ್ರಾಚಾರ್ಯ ಆರ್‌. ಎಸ್‌. ಮರಿಗೌಡರ ಮಾತನಾಡಿ ಇದು ಸ್ವಲ್ಪ ಲೇಟಾಗಿ ಶಿಬಿರ ಕಾರ್ಯಕ್ರಮ ಏರಿ​‍್ಡಸಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಈ ಊರಿನ ಎಲ್ಲಾ ಜನರ ಸಹಾಯ ಅಗತ್ಯ, ಈ ಶಾಲಾ ವಾತಾವರಣ ತುಂಬಾ ಚೆನ್ನಾಗಿದೆ. ಎಲ್ಲಾ ನಮ್ಮ ಸಿಡಿಸಿ ಸದಸ್ಯರು ನಮ್ಮ ಕಾಲೇಜಿನ ಏಳಿಗೆಗಾಗಿ ಶ್ರಮಿಸಿ, ಜನಪ್ರಿಯ ಶಾಸಕ ವಿಶ್ವಾಸ ವೈದ್ಯರ ಮತ್ತು ಕಾಲೇಜ್ ಅಭಿವೃದ್ಧಿ ಸಮಿತಿಯವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ ಎಂದರು.  

ಅಲ್ತಾಫ್ ಮುಲ್ಲಾ, ಗ್ರಾ. ಪಂ. ಸದಸ್ಯರಾದ ಶಿವಾನಂದ ಬಗನಾಳ, ಎಸ್‌ಡಿಎಂಸಿ ಅಧ್ಯಕ್ಷರಾದ ಸಿದ್ದಪ್ಪ ಚಿಕ್ಕನ್ನವರ, ಗಿಡ್ಡಪ್ಪ ಖಂಡ್ರಿ , ಪರಮೇಶ ಚತ್ರಕೋಟಿ, ಬಸು ಹಸಬಿ, ಪಂಚಾಯತ ಕಾರ್ಯದರ್ಶಿ ಮಲ್ಲಪ್ಪ ಕುರಿ, ಮುತ್ತು ದಳವಾಯಿ, ರಮೇಶ ಕೊಟೂರ, ಆರ್‌. ಎನ್‌. ಗುದಗಪ್ಪನವರ, ಸನ್ನಿಂಗಪ್ಪ ಮೇಟಿ, ಸುನಂದಾ ಮಾದರ, ಎಲ್ಲಾ ಗುರುಗಳು ಮತ್ತು ವಿದ್ಯಾರ್ಥಿಗಳು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ