ಕೆಎಬಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕ ಕುಮಟಳ್ಳಿ
ಅಥಣಿ: ಅಥಣಿ ತಾಲೂಕಿನ ಕೆಎಬಿ ಅಧಿಕಾರಿಗಳನ್ನು ಶಾಸಕ ಮಹೇಶ್ ಕುಮಟಳ್ಳಿ ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ಪಟ್ಟಣದಲ್ಲಿ ಸಂಭವಿಸಿತು. ತಾಲೂಕಿನಲ್ಲಿ ಕೊರೋನಾ ಮಹಾಮಾರಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಅಥಣಿ ತಾಲೂಕು ಆಡಳಿತ ಜೊತೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸಭೆ ನಡೆಸಿದರು. ಇದೆ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಅಂಕಿ ಅಂಶಗಳ ಮಾಹಿತಿ ಪಡೆದುಕೊಂಡರು. ಈ ವೇಳೆ ವೈದ್ಯಾಧಿಕಾರಿ ಡಾ, ಬಸನಗೌಡ ಕಾಗೆ ಶಾಸಕರಿಗೆ ತಾಲೂಕಿನ ಬಗ್ಗೆ ಕೋವಿಡ-19 ಅಂಕಿ ಅಂಶಗಳನ್ನು ತಿಳಿಸಿದರು.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂರು ಜನರಲ್ಲಿ ಬ್ಲ್ಯಾಕ್? ಫಂಗಸ್ ಸೋಂಕು ಕಾಣಿಸಿಕೊಂಡಿದೆ. ಕಪ್ಪು ಶಿಲೀಂದ್ರ ಕಾಯಿಲೆಯಿಂದಾಗಿ ಇದುವರೆವಿಗೂ ತಾಲೂಕಿನಲ್ಲಿ ಯಾರೂ ಮೃತಪಟ್ಟಿಲ್ಲ ಹಾಗೂ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಎರಡನೆ ಅಲೆ ವೇಳೆ 2181 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 120 ಜನರು ಮೃತಪಟ್ಟಿದ್ದಾರೆ. ಸೋಂಕಿನಿಂದ ಗುಣಮುಖರಾದ 1190 ಜನರನ್ನು ಡಿಸ್ಚಾಜರ್್ ಮಾಡಲಾಗಿದೆ. 816 ಸಕ್ರಿಯ ಪ್ರಕರಣಗಳಿದ್ದು, 732 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವೈದ್ಯಾಧಿಕಾರಿ ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಕಳೆದ ಒಂದು ತಿಂಗಳಿನಿಂದ ತಾಲೂಕಿನಲ್ಲಿ ವಿದ್ಯುತ್ ಪರಿವರ್ತನಾ ಸುಟ್ಟರೂ ರೈತರಿಗೆ ವಿತರಣೆ ಆಗದೆ ಇರುವುದಕ್ಕೆ ಅಧಿಕಾರಿಗಳನ್ನು ಶಾಸಕ ಮಹೇಶ್ ಕುಮಟಳ್ಳಿ ಪ್ರಶ್ನೆ ಮಾಡಿದರು. ಕೆಎಬಿ ಅಧಿಕಾರಿ ಕೊರೋನಾ ಬಂದಿದೆ ಸರ್ ಕೆಲಸಗಾರರು ಇಲ್ಲ ಹೆಂಗೆ ವಕರ್್ ಮಾಡುದೆಂದು ಶಾಸಕರಿಗೆ ಹಾರಿಕೆ ಉತ್ತರ ನೀಡಿದ್ದರಿಂದ ಶಾಸಕರು ಏನ್ರೀ ವೈದ್ಯಕೀಯ ಕ್ಷೇತ್ರದಲ್ಲಿ ಹಗಲು ಇರುಳು ದುಡಿಯುತ್ತಿದ್ದಾರೆ, ಅವರು ಕೊರೋನಾ ಬಂದಿದೆಂದು ಕೆಲಸ ಬಿಟ್ಟರೆ ಹೇಗೆ ಎಂದು ಶಾಸಕರು ಮರುಳಿ ಅಧಿಕಾರಿಗಳಿಗೆ ಪ್ರಶ್ನೆ ಹಾಕಿದರು. ಅಧಿಕಾರಿ ಅಸಮಂಜಸ ಉತ್ತರಕ್ಕೆ ಕುಮಟಳ್ಳಿ ಕೆಂಡಾಮಂಡಲವಾಗಿ ಅಥಣಿ ಬಿಟ್ಟು ತೊಲಗಿ, ಇಲ್ಲಿರುವ ಜನಸಾಮಾನ್ಯರಿಗೆ ವಿದ್ಯುತ್ ಸರಿಯಾಗಿ ನೀಡಿದೆ ಇರುವ ಅಧಿಕಾರಿಗಳು ಮೀನಾಮೇಷದಿಂದ ಕೆಲಸ ಮಾಡುತ್ತಿದ್ದೀರಿ ನಿಮ್ಮತ ಅಧಿಕಾರಿಗಳಿಂದ ಸಕರ್ಾರಕ್ಕೆ ಕೆಟ್ಟ ಹೆಸರು ಎಂದು ಖಾರವಾಗಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ಲಾಕ್ ಡೌನ್ ಸಮಯದಲ್ಲಿ ರೈತರಿಗೆ ತೊಂದರೆ ಉಂಟಾಗುತ್ತದೆ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.ಈ ವೇಳೆ ಆರ್ ಎಸ್ ಎಸ್ ಮುಖಂಡ ಅರವಿಂದರಾವ ದೇಶಪಾಂಡೆ, ತಹಶಿಲ್ದಾರ ದುಂಡಪ್ಪಾ ಕೋಮಾರ, ವೈದ್ಯಾಧಿಕಾರಿ ಡಾ ಬಸನಗೌಡ ಕಾಗೆ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ, ಡಿವೈಎಸ್ಪಿಎಸ್ ವಿ ಗಿರೀಶ ಸೇರಿದಂತೆ ಇತರರು ಉಪಸ್ಥಿತರಿದ್ದರು