ಡಾ. ಆರ್.ಎಂ. ಕುಬೇರಪ್ಪ ಅವರು ಶಿಕ್ಷಕರಿಗೆ ಮತ ಯಾಚಿಸಿದರು
ಲೋಕದರ್ಶನ ವರದಿ
ರಾಣಿಬೆನ್ನೂರ 09: ನಗರದ ಬಿಎಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಕರ್ನಾಟಕ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಪರವಾಗಿ ರಾಜ್ಯ ಕೆಪಿಸಿಸಿ ಪದವೀಧರ ಮತ್ತು ಶಿಕ್ಷಕ ಘಟಕದ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರ್ಪನವರು ಶಿಕ್ಷಕರಲ್ಲಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಜ್ಞಾವಂತ ಮತದಾರರಾದ ತಾವೆಲ್ಲರೂ ಪ್ರಥಮ ಪ್ರಾಶಸ್ತ್ಯದ ಮತವನ್ನು ಬಸವರಾಜ ಗುರಿಕಾರರವರಿಗೆ ನೀಬೇಕೆಂದು ಮನವಿ ಮಾಡಿದರು.
ಪ್ರಾಚಾರ್ಯ ಡಾಽ ಸುರೇಶ ಬಣಕಾರ, ಡಾಽ ಮೃತ್ಯುಂಜಯ, ಪ್ರೊ. ಪ್ರಕಾಶ ಬಸವಪ್ಪನವರ, ಎಚ್.ಬಿ. ಪಟ್ಟಣಶೆಟ್ಟಿ, ಹುಚ್ಚಗೊಂಡರ, ಕರಬಸಣ್ಣನವರ, ಪ್ರೊ. ದೇವರಾಜ ಹಂಚಿನಮನಿ, ಎಸ್.ಎಚ್.ಮಠದ ಹಾಗೂ ಸಂಸ್ಥೆಯ ಎಲ್ಲಾ ಬೋಧಕ ಸಿಬ್ಬಂದಿ ವರ್ಗ ಹಾಜರಿದ್ದರು.