ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ
ಶಿಗ್ಗಾವಿ 23: ಮಕ್ಕಳ ವಿಶೇಷ ಪ್ರತಿಭೆಯನ್ನು ಹಾಗೂ ಅವರ ಭಾಗವಹಿಸುವಿಕೆಯನ್ನು ಅರಿಯಲು ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರಾಚಾರ್ಯ ಎಸ್.ಹೆಚ್. ಹಾವೇರಿ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಕೃಷ್ಣ ಹಾಗೂ ರಾಧೆಯ ವೇಷಭೂಷಣ ಸ್ಪರ್ಧೆ ಉದ್ದೇಶಿಸಿ ಮಾತನಾಡಿ ನಮ್ಮ ದೇಶದ ಸಂಪ್ರದಾಯವನ್ನು ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ಹಾಗೂ ಪಾಲಕರ ಪೋಷಕರ ಭಾಗವಹಿಸುವಿಕೆಗೆ ಪ್ರಾತಿನಿಧ್ಯ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಶಿಕ್ಷಕಿ ಸುನೀತಾ ಕಮ್ಮಾರ ಮಾತನಾಡಿ ಮಕ್ಕಳಿಗೆ ಶಿಸ್ತು ಮತ್ತು ಭಯದ ವಾತಾವರಣದಿಂದ ಹೊರಬರಲು ಇಂತಹ ಚಟುವಟಿಕೆಗಳ ಅವಶ್ಯಕತೆ ಅರಿತು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಲ್ಲ ಮಕ್ಕಳು ಭಾಗವಹಿಸಿದ್ದು ಅದರಲ್ಲಿ ಮುಸ್ಲೀಂ ಸಮಾಜದ ಮಕ್ಕಳು ಸಹಿತ ವೇಷಭೂಷಣ ಧರಿಸಿದ್ದು ವಿಶೇಷವಾಗಿತ್ತು.
ಎಲ್.ಕೆ.ಜಿ ಮಕ್ಕಳಿಂದ ಮೂರನೇಯ ವರ್ಗದ ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯ ವೇಷಭೂಷಣ ಸ್ಪರ್ಧೆ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶೇಖರ ಪರಸಾಪೂರ, ಮಾರುತಿ ಲಮಾಣಿ, ಮಾರುತಿ ತಳವಾರ, ರವಿ ಸಂಕ್ಲಿಪೂರ, ಮಂಜುಳಾ ಪಾಟೀಲ, ಗಾಯತ್ರಿ ದೈವಜ್ಞ, ಪವಿತ್ರಾ ಬನ್ನಿಕೊಪ್ಪ, ವಿದ್ಯಾ ಹೆಸರೂರ, ಶೃತಿ ನವರತ್ನ, ಮಂಜುಳಾ.ಪಿ.ಬಿ, ಕೆ.ಎಸ್.ಅಶ್ವಿನಿ, ಲಾವಣ್ಯ, ಉಮಾ ಪೂಜಾರ, ಸಂಗೀತಾ ಹರಿಗೊಂಡ, ಶಾಲಿನಿ, ರಂಜೀತಾ, ಮಾಡಿಕ, ಶರಾವತಿ ಸೇರಿದಂತೆ ಪಾಲಕರು ಪೋಷಕರು ಮಕ್ಕಳು ವಿಶೇಷ ವೇಷಭೂಷಣದೊಂದಿಗೆ ಉಪಸ್ಥಿತರಿದ್ದರು.