ಕೋವಿಡ್ ನಿಯಮ ಗಾಳಿಗೆ ತೂರಿ ಜಿ.ಪಂ ಉಪಕಾರ್ಯದಶರ್ಿ ಸಭೆ
ಅಥಣಿ04: ಮಂಗಳವಾರ ದಿನ ಧೀಡಿರನೆ ಬೆಳಗಾವಿ ಜಿಲ್ಲಾ ಪಂಚಾಯತಿ ಉಪ-ಕಾರ್ಯದಶರ್ಿಗಳಾದ ಎ.ಬಿ. ಜಕ್ಕಪ್ಪನವರ ಕೋವ್ಹಿಡ್-19 ನಿಯಮ ಗಾಳಿಗೆ ತೂರಿ ತಾಲೂಕಾ ಮಟ್ಟದಲ್ಲಿ ಸಭೆ ನಡೆಸಿದರು. ಅದಲ್ಲದೆ ಸಭೆಯ ವಿಷಯಗಳ ಅಜೆಂಡಾ ಪಟ್ಟಿಯನ್ನು ವಾಟ್ಸ್ಯಾಪ್ನಲ್ಲಿ ಹರಿಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ! ರಾಜ್ಯ ಸರಕಾರದ ಮುಖ್ಯ ಕಾರ್ಯದಶರ್ಿಗಳು ಕೋವ್ಹಿಡ್ ಸಂಕಷ್ಟದ ಸಮಯದಲ್ಲಿ ಯಾವುದೇ ಅನವಶ್ಯಕ ಸಭೆ ನಡೆಸಬಾರದು. ನಡೆಸಿದರೂ ಕೂಡ ಅದನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಬೇಕು ಎಂದು ಕಟ್ಟು ನಿಟ್ಟಿನ ಆದೇಶ ಇದ್ದರು ಅದಕ್ಕೆ ಇಲ್ಲಿ ಕವಡೆ ಕಾಶಿನ ಕಿಮ್ಮತ ಇಲ್ಲದಂತಾಗಿದ್ದು ಇಂದಿನ ಸಭೆಯಲ್ಲಿ ಸಾಮಾಜಿಕ ಅಂತರ ಇಲ್ಲ, ಹ್ಯಾಂಡ್ ಸ್ಯಾನಿಟೈಜೇಷನ್ ಇಲ್ಲದೆ ಸಭೆ ನಡೆಸಿದ್ದು ತಾಲೂಕಿನಾದ್ಯಂತ ತೀವ್ರ ಚಚರ್ೆಯಾಗತೊಡಗಿದೆ. ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡಬೇಕು. ಉಧ್ಯೋಗ ಖಾತ್ರಿ ಯೋಜನೆಯನ್ನು ಜೋರಾಗಿ ಆರಂಭಿಸಬೇಕು. ಸ್ವಚ್ಚ ಭಾರತ ಯೋಜನೆ ಕ್ರಯಾ ಯೋಜನೆ ಕುರಿತು ಸೇರಿದಂತೆ ಇತರ ವಿಷಯಗಳನ್ನು ಚಚರ್ೆ ಮಾಡಿಲಾಗಿದೆ.ಅಥಣಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಕೊರೋನಾ ಎರಡನೆ ಅಲೆ ದಿನೆ ದಿನೆ ಕೈ ಮೀರಿ ಅಬ್ಬರಿಸುತಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸ್ಥಳ, ಆಕ್ಷಿಜನ್, ಇಂಜೇಕ್ಸನ್ ಸಿಗದೆ ಒದ್ದಾಡಿ ಸಾಯುತ್ತಿರುವಾಗ ಈ ಸಭೆ ಬೇಕಾಗಿತ್ತಾ !. ದಿನಾಲೂ ಸಾವಿನ ಸಂಖ್ಯೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೇರಿ ಸುಮಾರು 25ರ ಗಡಿ ಸಮೀಪಿಸುತಿದೆ. ಇದರ ಬಗ್ಗೆ ಚಿಂತನೆ ಮಾಡದೆ ಸಭೆಯಲ್ಲಿ ಅನಾವಶ್ಯಕತೆಗಳ ಚಚರ್ೆ ನಡೆದವು ಎಂದು ಮಾಹಿತಿ ದೊರೆತಿದೆ.
ಕೊರೋನಾಕ ಕಾಲದಲ್ಲಿ ಜನರ ಕೈಗೆ ಕಳೆದ ಒಂದು ತಿಂಗಳಿಂದ ಕೆಲಸ ಇಲ್ಲ. ಕಳೆದ ಭಾರಿ ಈ ಭಾರಿ ಲಾಕ್ಡೌನ್ನಿಂದಾಗಿ. ಆಥರ್ಿಕ ಸಂಕಷ್ಟದಲ್ಲಿ ಇರುವಾಗ ಸಭೆಯಲ್ಲಿನ ಚಚರ್ೆಯ ಪ್ರಕಾರ ಜನರು ತೆರಿಗೆ ಬೇಡಲು ಹೋದರೆ ಹೇಗೆ ಕೊಡಲು ಸಾಧ್ಯ. ಅದಲ್ಲದೆ ಸಾಮಾಜಿಕ ಅಂತರ ಕಾಯುವುದರ ಮೂಲಕ ಗುಂಪು ಕೆಲಸಕ್ಕೆ ಸರಕಾರ ಕಡಿವಾನ ಹಾಕುತಿದೆ ಆದರೆ ಉಧ್ಯೋಗ ಖಾತ್ರಿ ಯೋಜನೆ ಮಾಡಿಸುವದರ ಮೂಲಕ ಗುಂಪುಗಾರಿಕೆ ಹೆಚ್ಚಾಗಿ ರೋಗ ಉಲ್ಬಣವಾಗುತ್ತದೆ. ಅದಕ್ಕೆ ಮಹತ್ವ ನೀಡಬಾರದು ಎಂದು ನಿಯಮ ಸಹ ಜಾರಿಗೆ ತಂದಿದ್ದರು ಸಹ ಸಭೆಯಲ್ಲಿ ನ.ರೇ.ಗಾ ಕುರಿತು ಮಾತನಾಡಿದ್ದು ಆಶ್ಚರ್ಯವಾಗಿದೆ!
ಕೋಟೆ:ದಾಗ ಸಭೆ ನಡೆಸುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಆದೇಶ ಮಾಡುವೆ ಎಂದು ಹೇಳಿದರು