ಹೊಸಪೇಟೆ

ಮುಖ್ಯ ಸಚೇತಕರನ್ನಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಆಯ್ಕೆ

ಮುಖ್ಯ ಸಚೇತಕರನ್ನಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಆಯ್ಕೆ

ಹೊಸಪೇಟೆ 31: ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಹೊಸಪೇಟೆ ತಾಲೂಕು ಆರ್ಯ ಈಡಿಗ ಸೇವಾ ಟ್ರಸ್ಟ್‌ ಮತ್ತು ಸಮಾಜ ಮುಖಂಡರುಗಳೊಂದಿಗೆ, ಸಮಾಜದ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರನ್ನು ಮುಖ್ಯ ಸಚೇತಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಸಮಾಜದ ಬಂದುಗಳು ಸಿಹಿ ಹಂಚುವುದರ ಮೂಲಕ ಭಾರತೀಯ ಜನತಾ ಪಾರ್ಟಿಗೆ ಸಂಸದೀಯ ಮಂಡಳಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಮಾಜದ ಬಂಧುಗಳು ಈ ಸಂದರ್ಭದಲ್ಲಿ ತಿಳಿಸಿದರು.  

ಸಮಾಜದ ಮುಖಂಡರುಗಳಾದ ನಾರಾಯಣಸ್ವಾಮಿ, ವೆಂಕಟರಮಣ, ಸುಬ್ರಮಣ್ಯ ಪ್ರಹಲ್ಲಾದ್, ಕುಮಾರಸ್ವಾಮಿ, ಕೆ.ರಾಘವೇಂದ್ರ, ಪ್ರಸಾದ್, ರಂಗನಗೌಡ, ಅಂಜಿನಿ, ಶ್ರೀಕಾಂತ್, ಆನಂದಗೌಡ ಶಿಕ್ಷಕರು, ಜಂಬೋ ಹಿರಿಯಣ್ಣ, ಮತ್ತು ಸಮಾಜದ ಬಂಧುಮಿತ್ರ ಭಾಗಿಯಾಗಿ ಶುಭಕೋರಿದರು. 


ಸುದ್ದಿ ಓದಿ